ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಪ್ರಕರಣ: ಆರೋಪಿ ರಾಜೀವ್ ಗೌಡ ತಂಗಿದ್ದ ರೆಸಾರ್ಟ್ ನಲ್ಲಿ ಮಹಜರು

ಫೈಲ್ ಫೋಟೊ
ಮಂಗಳೂರು, ಜ.29: ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡಗೆ ಬೆದರಿಕೆ ಹಾಕಿ ತಲೆ ಮರೆಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ತಂಗಿದ್ದ ರೆಸಾರ್ಟ್, ಆತನ ಕಾರು ಪತ್ತೆಯಾಗಿದ್ದ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಗುರುವಾರ ಶಿಡ್ಲಘಟ್ಟದ ಪೊಲೀಸರು ಮಹಜರು ನಡೆಸಿದ್ದಾರೆ.
ಗುರುವಾರ ಸಂಜೆ ಪೊಲೀಸರು ಪಚ್ಚನಾಡಿಗೆ ತೆರಳಿ ಒಂದು ಗಂಟೆಗೂ ಹೆಚ್ಚು ಕಾಲ ಮಹಜರು ನಡೆಸಿ ಪೂರಕ ಸಾಕ್ಷಿ ಸಂಗ್ರಹಿಸಿರುವುದಾಗಿ ತಿಳಿದು ಬಂದಿದೆ.
ಆರೋಪಿ ವಾಸವಿದ್ದ ಕೊಠಡಿ, ಸೇವನೆ ಮಾಡಿದ ಆಹಾರ ಇತ್ಯಾದಿಗಳ ಮಾಹಿತಿ ಸಂಗ್ರಹಿಸಿದ್ದಾರೆ. ಮಹಜರು ವೇಳೆ ಫಾರ್ಮ್ಹೌಸ್ನಲ್ಲಿ ಕೆಲಸದಾಳುಗಳು ಮಾತ್ರ ಇದ್ದರು ಎನ್ನಲಾಗಿದೆ. ಅವರನ್ನೂ ಕೂಡ ವಿಚಾರಣೆ ನಡೆಸಿದ್ದಾರೆ. ನಗರದ ಪಡೀಲ್ನಲ್ಲಿರುವ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲೂ ಕೂಡ ಪೊಲೀಸರು ಮಹಜರು ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
Next Story





