ಎಸ್ಸೆಸ್ಸೆಫ್ ಸಾಹಿತ್ಯೋತ್ಸವ: ರಾಷ್ಟ್ರಮಟ್ಟದಲ್ಲಿ ಮಿಂಚಿದ ‘ಸಿದ್ರಾ’ ವಿದ್ಯಾರ್ಥಿಗಳು

ಮಂಗಳೂರು: ಕಲಬುರಗಿಯಲ್ಲಿ ನಡೆದ ಎಸ್ಸೆಸ್ಸೆಫ್ ರಾಷ್ಟ್ರಮಟ್ಟದ ಸಾಹಿತ್ಯೋತ್ಸವದಲ್ಲಿ ಸಿದ್ರಾ ಫೌಂಡೇಶನ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮಹಾರಾಷ್ಟ್ರದ ಪುಣೆಯಲ್ಲಿರುವ ಸಿದ್ರಾ ಇನ್ಸ್ ಟ್ಯೂಟ್ ಫಾರ್ ಇಸ್ಲಾಮಿಕ್ ಲೀಡರ್‌ಶಿಪ್ ಆ್ಯಂಡ್ ಎಕ್ಸ್‌ಲೆನ್ಸ್ ಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಜಯಗಳಿಸಿ ಸಾಧನೆ ಮಾಡಿದ್ದಾರೆ.
ಸೀನಿಯರ್ ವಿಭಾಗದ ಅರಬಿಕ್ ಕ್ಯಾಲಿಗ್ರಾಫಿಯಲ್ಲಿ ಮುಹಮ್ಮದ್ ಯೂಸುಫ್ ಸಫ್ವಾನ್ ಪ್ರಥಮ, ಕ್ಯಾಂಪಸ್ ವಿಭಾಗದ ಡಿಬೇಟ್‌ನಲ್ಲಿ ಮುಹಮ್ಮದ್ ಮುಫೀದ್ ಹಮೀದ್ ಪ್ರಥಮ, ಸ್ಪಾಟ್ ಮ್ಯಾಗಝಿನ್‌ನಲ್ಲಿ ದ್ವಿತೀಯ, ಉರ್ದು ಹಮ್ದ್‌ನಲ್ಲಿ ತೃತೀಯ, ಸೀನಿಯರ್ ವಿಭಾಗದ ಇಂಗ್ಲಿಷ್ ಕವನ ವಾಚನ ಮತ್ತು ಕಥೆ ರಚನೆಯಲ್ಲಿ ಮುಹಮ್ಮದ್ ಜಾಫರ್ ದ್ವಿತೀಯ, ಕ್ಯಾಂಪಸ್ ವಿಭಾಗದಲ್ಲಿ ಸಾಹಿತ್ಯ ವಿಮರ್ಶೆ, ಸ್ಪಾಟ್ ಮ್ಯಾಗಝೀನ್ ಮುಹಮ್ಮದ್ ಮುನೀರ್ ದ್ವಿತೀಯ ಮತ್ತು ಫೀಚರ್ ಬರವಣಿಗೆಯಲ್ಲಿ ತೃತೀಯ, ಜನರಲ್ ವಿಭಾದ ಅರಬಿಕ್ ಪ್ರಬಂಧ ಬರವಣಿಗೆಯಲ್ಲಿ ಮುಹಮ್ಮದ್ ರಮೀಝ್ ದ್ವಿತೀಯ, ಸೀನಿಯರ್ ವಿಭಾದ ಕ್ವಿಝ್‌ನಲ್ಲಿ ಮುಹಮ್ಮದ್ ರಮೀಝ್ ದ್ವಿತೀಯ, ಕ್ಯಾಂಪಸ್ ವಿಭಾಗದ ಎಐ ಪ್ರಾಂಪ್ಟಿಂಗ್ ಮತ್ತು ಸ್ಪಾಟ್ ಮ್ಯಾಗಝೀನ್‌ನಲ್ಲಿ ಆಶಿಕ್ ರಫೀಕ್ ದ್ವಿತೀಯ, ಜನರಲ್ ವಿಭಾಗದ ಅರಬಿಕ್ ಪ್ರಬಂಧ ಬರವಣಿಗೆಯಲ್ಲಿ ಮುಹಮ್ಮದ್ ರಮೀಝ್ ದ್ವಿತೀಯ, ಕ್ಯಾಂಪಸ್ ವಿಭಾಗದ ಸ್ಪಾಟ್ ಮ್ಯಾಗಝೀನ್‌ನಲ್ಲಿ ಮುಹಮ್ಮದ್ ಶಿಬಿಲಿ ದ್ವಿತೀಯ, ಡಿಜಿಟಲ್ ಡಿಝೈನಿಂಗ್ ಮತ್ತು ಸ್ಪಾಟ್ ಮ್ಯಾಗಝೀನ್‌ನಲ್ಲಿ ಅಬ್ದುಲ್ ಬಾಸಿತ್ ದ್ವಿತೀಯ, ಜೂನಿಯರ್ ವಿಭಾಗದ ಹಿಂದಿ ಕವನ ವಾಚನದಲ್ಲಿ ಮುಹಮ್ಮದ್ ಗೌಸ್ ತೃತೀಯ, ಸೀನಿಯರ್ ವಿಭಾಗದ ಸಲಾಮೆ ರಝಾದಲ್ಲಿ ಮುಹಮ್ಮದ್ ಹಾಶಿರ್, ಅಝರುದ್ದೀನ್ ಅಬ್ಬಾಸ್, ಮುಹಮ್ಮದ್ ಜಾಫರ್ ತೃತೀಯ ಮತ್ತು ಜನರಲ್ ವಿಭಾಗದ ಕ್ವಿಝ್‌ನಲ್ಲಿ ಮುಹಮ್ಮದ್ ಅಲಿ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.





