ಎಸ್‌ಜೆಎಂ ಮುಡಿಪು ರೇಂಜ್ : ಮುಅಲ್ಲಿಮ್ ಮೆಹರ್‌ಜಾನ್ ಸಮಾಪ್ತಿ

ಮುಡಿಪು : ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ಅಂಗೀಕೃತ ಮದ್ರಸಗಳಲ್ಲಿ ಕಲಿಸುತ್ತಿರುವ ಅಧ್ಯಾಪಕರಲ್ಲಿ ಅಡಗಿರುವ ಸೂಕ್ತ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ನಡೆಸುತ್ತಿರುವ ಮುಅಲ್ಲಿಮ್ ಮೆಹರ್ಜಾನ್ ಇದರ ಮುಡಿಪು ರೇಂಜ್ ಮಟ್ಟದ ಸ್ಪರ್ಧಾ ಕಾರ್ಯಕ್ರಮವು ಮುನವ್ವಿರುಲ್ ಇಸ್ಲಾಂ ಸೆಕೆಂಡರಿ ಮದ್ರಸ ಸಭಾಂಗಣದಲ್ಲಿ ನಡೆಯಿತು.
ಸ್ಥಳೀಯ ಜಮಾಅತ್ ಉಪಾಧ್ಯಕ್ಷರಾದ ಹಾಜಿ ಮುಸ್ತಫಾ ಬದ್ರಿಯಾರವರು ಧ್ವಜಾರೋಹಣಗೈದರು. ಉದ್ಘಾಟನಾ ಸಮಾರಂಭವು ಅಬೂಬಕರ್ ಸಅದಿ ಕಡ್ವಾಯಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸ್ಥಳೀಯ ಮುದರ್ರಿಸ್ ಅಬ್ದುಲ್ ರಹ್ಮಾನ್ ಸಖಾಫಿರವರು ಪ್ರಾರ್ಥನೆಗೆ ನೇತೃತ್ವ ನೀಡಿದರು. ಎಸ್‌ಜೆಎಂ ದಕ್ಷಿಣ ಕನ್ನಡ ಸೌತ್ ಜಿಲ್ಲಾಧ್ಯಕ್ಷರಾದ ಯಾಕೂಬ್ ಲತೀಫಿರವರು ಸಭೆಯನ್ನು ಉದ್ಘಾಟಿಸಿದರು. ಎಸ್‌ಎಂಎ ಮುಡಿಪು ರೀಜಿನಲ್ ಅಧ್ಯಕ್ಷರಾದ ಅಬೂಬಕರ್ ಹಾಜಿ ಮದ್ಯನಡ್ಕ, ಕೋಶಾಧಿಕಾರಿ ಯೂಸುಫ್ ಇರಾಮೂಲೆ ಮಾತನಾಡಿದರು. ಝೈನುಲ್ ಆಬಿದ್ ನಈಮಿ ಇರಾಮೂಲೆ ಸ್ವಾಗತಿಸಿ, ಅಬ್ದುಲ್ ರಹ್ಮಾನ್ ಸಖಾಫಿ ಮುದುಂಗಾರು ಧನ್ಯವಾದ ಸಲ್ಲಿಸಿದರು.
ಮುಡಿಪು ರೇಂಜ್ ವ್ಯಾಪ್ತಿಯಲ್ಲಿರುವ 15 ಮದ್ರಸಗಳ 50ರಷ್ಟು ಅಧ್ಯಾಪಕರು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಹೈಝೋನ್ ವಿಭಾಗದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದು ಎಂಕೆಎಂ ಹನೀಫ್ ಕಾಮಿಲ್ ಸಖಾಫಿ ಅಲ್ ಅರ್ಶದಿ ಹಾಗೂ ಗ್ರೌಂಡ್ ಝೋನ್ ವಿಭಾಗದಲ್ಲಿ ಟಾಪ್ ಸ್ಕೋರರ್ ಆಗಿ ಮುಹಮ್ಮದ್ ಅನ್ಸಾರ್ ಸಖಾಫಿಯವರು ವ್ಯಕ್ತಿಗತ ಚಾಂಪಿಯನ್‌ಗಳಾಗಿ ಮೂಡಿ ಬಂದರು.
ಸಮಾರೋಪ ಸಮಾರಂಭವು ರೇಂಜ್ ಅಧ್ಯಕ್ಷರಾದ ಮೊಯ್ದೀನ್ ಕಾಮಿಲ್ ಸಖಾಫಿರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕೆಬಿ ಅಬ್ದುಲ್ ರಹ್ಮಾನ್ ಮದನಿ ದುಆ ಮಾಡಿದರು.SJM ದ.ಕ ಸೌತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ ಸಅದಿರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್‌ಎಂಎ ಮುಡಿಪು ರೀಜಿನಲ್ ಪ್ರಧಾನ ಕಾರ್ಯದರ್ಶಿ ಎಂಕೆಎಂ ಹನೀಫ್ ಕಾಮಿಲ್ ಸಖಾಫಿ ಕಾಯಾರ್, ಮುಫತ್ತಿಷ್ ಅಬೂಬಕರ್ ಸಿದ್ದೀಕ್ ಮಿಸ್ಬಾಹಿ, ಉಮರ್ ಅಮ್ಜದಿ ಕುಕ್ಕಿಲ ಮಾತನಾಡಿದರು.
ರೇಂಜ್ ಪ್ರಧಾನ ಕಾರ್ಯದರ್ಶಿ ಹಾರಿಸ್ ಅಬ್ದುಲ್ಲಾ ಹನೀಫೀ ಇರಾಮೂಲೆ ಸ್ವಾಗತಿಸಿದರು. ಮುಹಮ್ಮದ್ ಸಲೀತ್ ಹಿಮಮಿ ಕಾಮಿಲ್ ಸಖಾಫಿ ಧನ್ಯವಾದ ಸಲ್ಲಿಸಿದರು. ಸಿದ್ದೀಕ್ ಸಅದಿ ಮಧ್ಯನಡ್ಕ, ಮುಹಮ್ಮದ್ ಹನೀಫ್ ಕಾಮಿಲ್ ಸಖಾಫಿ ಪರಪ್ಪು ಕಾರ್ಯಕ್ರಮ ನಿರ್ವಹಿಸಿದರು.







