ಎಸ್ ಜೆ ಎಂ ಉಳ್ಳಾಲ ರೇಂಜ್ ಮಹಾಸಭೆ

ಉಳ್ಳಾಲ:ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ಮಹಾಸಭೆಯು ಆಝಾದ್ ನಗರದ ಅನ್ವಾರುಲ್ ಉಲೂಂ ಮದ್ರಸ ಆಡಿಟೋರಿಯಂ ನಲ್ಲಿ ನಡೆಯಿತು.
ಅಧ್ಯಕ್ಷ ಜಲಾಲುದ್ದೀನ್ ಮದನಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಅಝಾದ್ ನಗರ ಮಸೀದಿಯ ಖತೀಬ್ ಅಬ್ದುಸ್ಸಮದ್ ಅಹ್ಸನಿ ದುಆ ನೆರವೇರಿಸಿದರು. ಸಹಾಯಕ ಕಾರ್ಯದರ್ಶಿ ಇರ್ಫಾನ್ ಸಅದಿ ಅಳೇಕಲ ಖಿರಾಅತ್ ಪಠಿಸಿದರು. ಎಸ್ ಜೆ ಎಂ ಉಳ್ಳಾಲ ರೇಂಜ್ ಹಾಗು ಸಯ್ಯಿದ್ ಮದನಿ ಅರೆಬಿಕ್ ಎಜ್ಯುಕೇಶನಲ್ ಟ್ರಸ್ಟ್ ಮುಫತ್ತಿಶ್ ಹುಸೈನ್ ಸಅದಿ ಹೊಸ್ಮಾರ್ ಸಭೆಯನ್ನು ಉದ್ಘಾಟಿಸಿ, ಮಾತನಾಡಿದರು .
ರೇಂಜ್ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಫಾಳಿಲಿ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಬಶೀರ್ ಸಖಾಫಿ ಉಳ್ಳಾಲ ಲೆಕ್ಕಪತ್ರ ಮಂಡಿಸಿದರು. ನವಾಝ್ ಸಖಾಫಿ ಉಳ್ಳಾಲ ಪರೀಕ್ಷಾ ಹಾಗು ವೆಲ್ಫೇರ್ ವರದಿಯನ್ನು ಮಂಡಿಸಿದರು.
ಈ ಸಂದರ್ಭದಲ್ಲಿ 2024-25 ನೇ ಸಾಲಿನ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ರೇಂಜ್ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿ, ವಿದ್ಯಾರ್ಥಿನಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಚುನಾವಣಾ ವೀಕ್ಷಕರಾಗಿ ಆಗಮಿಸಿದ ಎಸ್ ಜೆ ಎಂ ವೆಸ್ಟ್ ಜಿಲ್ಲಾಧ್ಯಕ್ಷ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ನೂತನ ಸಮಿತಿ ಆಯ್ಕೆ ಪ್ರಕ್ರಿಯೆಗೆ ನೇತೃತ್ವ ವಹಿಸಿದರು.
ಎಸ್ ಜೆಎಂ ಅಧ್ಯಕ್ಷರಾಗಿ ಜಲಾಲುದ್ದೀನ್ ಮದನಿ, ಪ್ರಧಾನ ಕಾರ್ಯದರ್ಶಿಯಾಗಿ ನವಾಝ್ ಸಖಾಫಿ, ಉಳ್ಳಾಲ ಕೋಶಾಧಿಕಾರಿಯಾಗಿ, ವಿ ಎ ಮುಹಮ್ಮದ್ ಸಖಾಫಿ ಉಳ್ಳಾಲ ಆಯ್ಕೆಯಾದರು. ಐಟಿ, ಎಕ್ಸಾಂ, ವೆಲ್ಫೇರ್ ಉಪಾಧ್ಯಕ್ಷರಾಗಿ ಕೆ ಎಂ ಮುಹ್ಯಿದ್ದೀನ್ ಮದನಿ ಕಟ್ಟತ್ತಿಲ, ಕಾರ್ಯದರ್ಶಿಯಾಗಿ ಇರ್ಫಾನ್ ಫಾಳಿಲಿ ಅಲ್ ಹಿಕಮಿ, ಟ್ರೈನಿಂಗ್ ಮತ್ತು ಮಿಷನರಿ ಉಪಾಧ್ಯಕ್ಷರಾಗಿ ಯೂನುಸ್ ಇಮ್ದಾದಿ ಅಲ್ ಫುರ್ಖಾನಿ, ಕಾರ್ಯದರ್ಶಿಯಾಗಿ ಬಶೀರ್ ಸಖಾಫಿ ಉಳ್ಳಾಲ, ಮ್ಯಾಗಝಿನ್ ವಿಭಾಗದ ಉಪಾಧ್ಯಕ್ಷರಾಗಿ ಎನ್ ಡಿ ಮದನಿ ಬೋಳಂತೂರು, ಕಾರ್ಯದರ್ಶಿಯಾಗಿ ಸೆರ್ಕಳ ಇಬ್ರಾಹಿಂ ಸಖಾಫಿ, ಪಿಂಚಣಿ ಉಪಾಧ್ಯಕ್ಷರಾಗಿ ಅಬ್ಬಾಸ್ ಮದನಿ ಬಂಡಾಡಿ, ಕಾರ್ಯದರ್ಶಿಯಾಗಿ ಅಬ್ದುರ್ರಝ್ಝಾಖ್ ಮದನಿ ದಾರಂದಬಾಗಿಲು ಆಯ್ಕೆಯಾದರು.