ಫೆ.7 ರಿಂದ SKIMVB ನ ಪಬ್ಲಿಕ್ ಪರೀಕ್ಷೆ ಪ್ರಾರಂಭ
▶️ಮೂರು ಹಂತಗಳಲ್ಲಿ ಪರೀಕ್ಷೆ ▶️ಹುಬ್ಬಳ್ಳಿಯಲ್ಲಿ ನೂತನ ಡಿವಿಷನ್ ಸೆಂಟರ್

ಸಾಂದರ್ಭಿಕ ಚಿತ್ರ (freepik)
ಮಂಗಳೂರು. 2024-25 ನೇ ಸಾಲಿನ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಅಧೀನದ ಮದರಸಗಳ 5,7,10,12 ತರಗತಿಗಳ ಪಬ್ಲಿಕ್ ಪರೀಕ್ಷೆಗಳು ಫೆಬ್ರವರಿ ಏಳರಿಂದ ಪ್ರಾರಂಭವಾಗಲಿದ್ದು ಮೂರು ಹಂತಗಳಲ್ಲಿ ಪರೀಕ್ಷೆಗಳು ನಡೆಯಲಿವೆ.
ವಿದೇಶ ರಾಷ್ಟ್ರಗಳಲ್ಲಿ ಫೆಬ್ರವರಿ 7 ಮತ್ತು 8ರಂದು ಪರೀಕ್ಷೆ ನಡೆಯಲಿದ್ದು, ಭಾರತದಲ್ಲಿ ಜನರಲ್ ವಿಭಾಗದ ಮದರಸಗಳಿಗೆ ಫೆಬ್ರವರಿ ಎಂಟು ಒಂಬತ್ತು ಹತ್ತು ದಿನಾಂಕಗಳಲ್ಲಿ ಹಾಗೂ ಸ್ಕೂಲ್ ಸಿಲೆಬಸ್ ಪ್ರಕಾರದ ಮದರಸಗಳಲ್ಲಿ ಫೆಬ್ರವರಿ 22,23 ದಿನಾಂಕಗಳಲ್ಲಿ ಪಬ್ಲಿಕ್ ಪರೀಕ್ಷೆಗಳು ನಡೆಯಲಿವೆ.
ಅರಬಿಕ್ ಕ್ಯಾಲೆಂಡರ್ ಪ್ರಕಾರ ಶವ್ವಾಲ್ ನಲ್ಲಿ ಪ್ರಾರಂಭಗೊಂಡು ಶಅಬಾನ್ ನಲ್ಲಿ ಕೊನೆಗೊಳ್ಳುವ ಮದರಸಗಳು ಜನರಲ್ ವಿಭಾಗವಾಗಿದ್ದು, ಶಾಲಾ ಕ್ರಮದಂತೆ ಜೂನ್ ನಲ್ಲಿ ಆರಂಭಗೊಂಡು ಮಾರ್ಚ್ ಗೆ ಕೊನೆಗೊಳ್ಳುವ ಮದರಸಗಳು ಸ್ಕೂಲ್ ಸಿಲಬಸ್ ಮದರಸಗಳಾಗಿರುತ್ತದೆ.
ಕರ್ನಾಟಕದಲ್ಲಿ ಪ್ರತಿವರ್ಷದಂತೆ ದಕ್ಷಿಣಕನ್ನಡ,ಉಡುಪಿ, ಚಿಕ್ಕಮಂಗಳೂರು, ಶಿವಮೊಗ್ಗ, ಹಾಸನ, ಕೊಡಗು, ಮೈಸೂರು, ಬೆಂಗಳೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಮಸ್ತ ಮದರಸ ಪಬ್ಲಿಕ್ ಪರೀಕ್ಷೆಗಳು ನಡೆಯಲಿದ್ದು, ಈ ವರ್ಷ ಹೆಚ್ಚುವರಿಯಾಗಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ನೂತನ ಡಿವಿಷನ್ ಕೇಂದ್ರವನ್ನು ಸ್ಥಾಪಿಸಲಾಗಿದೆ. ಹುಬ್ಬಳ್ಳಿಯ ಡಿವಿಷನ್ ನ ಎಂಟು ಸೆಂಟರ್ ಗಳಲ್ಲಿ ಈ ವರ್ಷ ಹೊಸದಾಗಿ ಸಮಸ್ತ ಮದರಸ ಪಬ್ಲಿಕ್ ಪರೀಕ್ಷೆಗಳು ನಡೆಯಲಿದೆ.
ಪಬ್ಲಿಕ್ ಪರೀಕ್ಷೆಗೆ ಮೇಲ್ವಿಚಾರಕರಾಗಿ ತೆರಳಬೇಕಾದವರಿಗೆ ಐಡೆಂಟಿಟಿ ಕಾರ್ಡ್ ಮತ್ತು ಸುತ್ತೋಲೆಗಳನ್ನು ಈಗಾಗಲೇ ವಿತರಿಸಲಾಗಿದ್ದು, ಪರೀಕ್ಷೆ ಪೂರ್ವವಾಗಿ ಮಾಹಿತಿ ಶಿಬಿರ ಕೂಡ ಆಯಾ ವಿಭಾಗೀಯ ಕೇಂದ್ರಗಳಲ್ಲಿ ನಡೆಯಲಿದೆಯೆಂದು ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.