ಮಂಗಳೂರು: ಅಬ್ದುಲ್ ರಹ್ಮಾನ್ ಹತ್ಯೆ ಖಂಡಿಸಿ ಮೇ 31 ರಂದು ಎಸ್ಕೆಎಸೆಸ್ಸೆಫ್ ಪ್ರತಿಭಟನೆ

ಮಂಗಳೂರು: ಎಸ್ಕೆಎಸೆಸ್ಸೆಫ್ ಸಕ್ರಿಯ ಕಾರ್ಯಕರ್ತ ಮತ್ತು ಕೊಳತ್ತಮಜಲು ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಮತ್ತು ಕುಡುಪುವಿನಲ್ಲಿ ಅಶ್ರಫ್‌ರನ್ನು ಹತ್ಯೆಗೈದ ಕೃತ್ಯವನ್ನು ಖಂಡಿಸಿ ಮತ್ತು ಕೋಮುಪ್ರಚೋದನಾ ಭಾಷಣಗಾರರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಎಸ್ಕೆಎಸೆಸ್ಸೆಫ್ ವೆಸ್ಟ್ ಜಿಲ್ಲಾ ಸಮಿತಿಯ ವತಿಯಿಂದ ಮೇ 31ರಂದು ಅಪರಾಹ್ನ 3ಕ್ಕೆ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಲಿದೆ.
ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು ಜಂ ಇಯ್ಯತ್ತುಲ್ ಖುತಬಾ ದ.ಕ.ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ರಹ್ಮಾನಿ ಪರ್ಲಡ್ಕ ಕರೆ ನೀಡಿದ್ದಾರೆ.
Next Story





