Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಮಳೆ, ಬಿಸಿಲಿಗೆ ನೆನೆಯುತ್ತಿದೆ ಮತ್ಸ್ಯ...

ಮಳೆ, ಬಿಸಿಲಿಗೆ ನೆನೆಯುತ್ತಿದೆ ಮತ್ಸ್ಯ ವಾಹಿನಿ: ಸುಳ್ಯ ತಾ.ಪಂ. ಕಚೇರಿ ಬಳಿಯೇ ಇದೆ ಇನ್ನೂ 4 ವಾಹನಗಳು

ವಾರ್ತಾಭಾರತಿವಾರ್ತಾಭಾರತಿ6 Oct 2023 10:18 PM IST
share
ಮಳೆ, ಬಿಸಿಲಿಗೆ ನೆನೆಯುತ್ತಿದೆ ಮತ್ಸ್ಯ ವಾಹಿನಿ: ಸುಳ್ಯ ತಾ.ಪಂ. ಕಚೇರಿ ಬಳಿಯೇ ಇದೆ ಇನ್ನೂ 4 ವಾಹನಗಳು

ಸುಳ್ಯ: ಸ್ವಾವಲಂಬಿ ಬದುಕಿಗಾಗಿ ಸ್ವ ಉದ್ಯೋಗ ಕಾರ್ಯಕ್ರಮದಡಿ ಸುಳ್ಯದಲ್ಲಿ ಲೋಕಾರ್ಪಣೆಗೆ ತರಲಾಗಿದ್ದ 12 ಮತ್ಸ್ಯ ವಾಹಿನಿ ವಾಹನಗಳಲ್ಲಿ ಇನ್ನೂ 4 ವಾಹನಗಳು ಸುಳ್ಯದ ತಾಲೂಕು ಪಂಚಾಯತ್ ಕಚೇರಿ ಬಳಿ ಬಿಸಿಲು, ಮಳೆಗೆ ನೆನೆಯುತ್ತಿದೆ. ಸಂಬಂಧಿಸಿದವರ ನಿರ್ಲಕ್ಷ್ಯದಿಂದ ಸರಕಾರದ ಸೊತ್ತು ಹಾಳಾಗುವ ರೀತಿಯಲ್ಲಿದೆ.

ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸ್ವಾವಲಂಬಿ ಬದುಕಿಗಾಗಿ ಸ್ವ ಉದ್ಯೋಗ ಮನೆ ಬಾಗಿಲಿಗೆ ತಾಜಾ ಮೀನು ಸರಬರಾಜು ಮಾಡುವ ಮತ್ಸ್ಯ ವಾಹಿನಿ ತ್ರಿಚಕ್ರ ವಾಹನಗಳ ಲೋಕಾರ್ಪಣೆ ಕಾರ್ಯಕ್ರಮ ಕಳೆದ ಮಾ.26ರಂದು ಸುಳ್ಯದಲ್ಲಿ ನಡೆದಿತ್ತು. ಅಂದಿನ ಮೀನುಗಾರಿಕೆ ಸಚಿವ ಎಸ್.ಅಂಗಾರ ಅವರು ವಾಹನ ಲೋಕಾ ರ್ಪಣೆ ಮಾಡಿದ್ದರು. ಇದಕ್ಕಾಗಿ ಸುಳ್ಯಕ್ಕೆ ಮತ್ಸ್ಯ ವಾಹಿನಿ ವಾಹನಗಳನ್ನು ತರಲಾಗಿತ್ತು. ಲೋಕಾರ್ಪಣೆ ಬಳಿಕ ಅದನ್ನು ಸುಳ್ಯದ ತಾ.ಪಂ. ಕಚೇರಿ ಬಳಿ ನಿಲ್ಲಿಸಲಾಗಿತ್ತು.

ಸುಳ್ಯ ತಾ.ಪಂ. ಕಚೇರಿ ಬಳಿ ಲೋಕಾರ್ಪಣೆಗೆ ಸುಮಾರು 12 ಮತ್ಸ್ಯ ವಾಹಿನಿಯ ತ್ರಿಚಕ್ರ ವಾಹನಗಳನ್ನು ತರಲಾಗಿತ್ತು. ಈ ವಾಹನಗಳು ಅನಾಥ ಸ್ಥಿತಿಯಲ್ಲಿರುವ ಬಗ್ಗೆ ಮೇ 24ರಂದು ವರದಿ ಪ್ರಕಟಗೊಂಡಿತ್ತು. ವರದಿ ಪ್ರಕಟಗೊಂಡ ಬೆನ್ನಲ್ಲೇ ಸುಮಾರು ಎಂಟು ವಾಹನಗಳನ್ನು ಕೆಎಫ್‍ಡಿಸಿ ಯವರು ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಶೆಡ್‍ಗೆ ಕೊಂಡೊ ಯ್ದಿದ್ದರು. ಆದರೆ ನಾಲ್ಕು ವಾಹನಗಳು ಇನ್ನೂ ಸುಳ್ಯದಲ್ಲೇ ಬಾಕಿಯಾಗಿದೆ.

ಇದೀಗ ಈ ನಾಲ್ಕು ವಾಹನಗಳನ್ನು ನಿಲ್ಲಿಸಲಾದ ಸ್ಥಳದಲ್ಲಿ ಹುಲ್ಲು, ಗಿಡಗಳು ಬೆಳೆದು ವಾಹನಗಳು ಸುತ್ತುವರಿಸಲು ಆರಂಭಿಸಿದೆ. ಅಲ್ಲದೇ ಮಳೆಯ ನೀರು ವಾಹನದೊಳಗೆ ಹೋಗಿ ವಾಹನ ತುಕ್ಕು ಹಿಡಿಯುವ ಮುನ್ಸೂಚನೆ ಕಾಣುತ್ತಿದೆ. ಒಟ್ಟಿನಲ್ಲಿ ಬಿಸಿಲು, ಮಳೆಗೆ ವಾಹನಗಳು ಹಾನಿಗೊಳ್ಳುತ್ತಿರುವುದು ಕಂಡುಬಂದಿದೆ.

ಈ ವಾಹನದ ಗುತ್ತಿಗೆ ವಹಿಸಿಕೊಂಡಿದ್ದ ಖಾಸಗಿ ಸಂಸ್ಥೆ ಅವರು ಈ ವಾಹನವನ್ನು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮಕ್ಕೆ ಹಸ್ತಾಂತರ ಮಾಡಿಲ್ಲ ಎನ್ನುವುದು ಕೆಎಫ್‍ಡಿಸಿ ಸಂಸ್ಥೆಯವರು ಮಾಹಿತಿ. ಬೆಂಗಳೂರಿನಲ್ಲಿ ಇದರ ರಿಜಿಸ್ಟ್ರೇಶನ್ ಕೂಡ ಆಗಿಲ್ಲ ಎನ್ನಲಾಗಿದೆ, ಜತೆಗೆ ಅವರಿಗೆ ಪೂರ್ತಿ ಬಿಲ್ ಕೂಡ ಪಾವತಿಯಾಗಿಲ್ಲ ಎನ್ನಲಾಗಿದ್ದು, ಈ ಎಲ್ಲಾ ಕಾರಣ ಗಳಿಂದ ಈ ವಾಹನ ಇಲ್ಲೇ ಬಾಕಿಯಾಗಿದೆ ಎನ್ನುವುದು ಇನ್ನೊಂದು ಮಾಹಿತಿ. ಇದು ರಾಜ್ಯ ಹಾಗೂ ಕೇಂದ್ರ ಸರಕಾರದ ಅನುದಾನದ ಯೋಜನೆಯಾಗಿದ್ದು, ಒಟ್ಟು ಗೊಂದಲಗಳಿಂದ ಫಲಾನುಭವಿಗಳ ಕೈ ಸೇರಬೇಕಾದ ಹೊಸ ಮತ್ಸ್ಯ ವಾಹಿನಿ ವಾಹನಗಳು ಸುಳ್ಯದಲ್ಲಿ ಸೂಕ್ತ ರಕ್ಷಣೆ ಇಲ್ಲದೇ ಅನಾಥ ಸ್ಥಿತಿಯಲ್ಲಿರುವುದು ದುರಂತ ಸಂಗತಿ.

"ಮತ್ಸ್ಯ ವಾಹಿನಿ ವಾಹನ ಇನ್ನೂ ಕೆಎಫ್‍ಡಿಸಿಗೆ ಹಸ್ತಾಂತರ ಆಗಿಲ್ಲ. ಸುಳ್ಯದಲ್ಲಿದ್ದ 12 ವಾಹನಗಳಲ್ಲಿ 8 ವಾಹನಗಳನ್ನು ಮಂಗಳೂರು ಕಾಲೇಜಿನ ಶೆಡ್‍ನಲ್ಲಿ ತಂದಿರಿಸಲಾಗಿದೆ. ಬೆಂಗಳೂರಿನಲ್ಲಿ 150 ವಾಹನಗಳನ್ನು ಟ್ರಯಲ್ ಲಾಂಚ್ ಮಾಡಲು ತಿಳಿಸಲಾಗಿದೆ. ಆದ್ದರಿಂದ ಸುಳ್ಯದಲ್ಲಿರುವ ವಾಹನಗಳನ್ನು ಅಲ್ಲಿಂದ ಬೆಂಗಳೂರಿಗೆ ತೆಗೆದುಕೊಂಡು ಹೋಗಬಹುದು".

- ಕೆ.ಗಣೇಶ್‌

ವ್ಯವಸ್ಥಾಪಕ ನಿರ್ದೇಶಕರು, ಕೆಎಫ್‍ಡಿಸಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X