ಸೋಶಿಯಲ್ ಇಖ್ವಾ ಫೆಡರೇಶನ್ ಮಾಣಿ: ನೂತನ ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಕೊಡಾಜೆ ,ಕಾರ್ಯದರ್ಶಿಯಾಗಿ ಜೈನುಲ್ ಅಕ್ಬರ್ ಕಡೇಶ್ವಾಲ್ಯ ಆಯ್ಕೆ

ಮಾಣಿ: ಸೋಶಿಯಲ್ ಇಖ್ವಾ ಫೆಡರೇಶನ್ ಮಾಣಿ ಇದರ ಮಹಾಸಭೆಯು ಇಂಡಿಯನ್ ಆಡಿಟೋರಿಯಂ ನೇರಳಕಟ್ಟೆಯಲ್ಲಿ ಆದಿತ್ಯವಾರ ನಡೆಯಿತು.ಸಂಘಟನೆಯ 2023-25 ನೇ ಸಾಲಿನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಕೊಡಾಜೆ ,ಉಪಾಧ್ಯಕ್ಷರಾಗಿ ಸಲೀಂ ಕೆ.ಬಿ. ,ಪ್ರಧಾನ ಕಾರ್ಯದರ್ಶಿಯಾಗಿ ಜೈನುಲ್ ಅಕ್ಬರ್ ಕಡೇಶ್ವಾಲ್ಯ ,ಜೊತೆ ಕಾರ್ಯದರ್ಶಿಯಾಗಿ ರಶೀದ್ ನೀರಪಾದೆ, ಕೋಶಾಧಿಕಾರಿಯಾಗಿ ರಿಯಾಝ್ ಕಲ್ಲಾಜೆ,ಶೈಕ್ಷಣಿಕ ಕಾರ್ಯದರ್ಶಿಯಾಗಿ ಲತೀಫ್ ಕೊಡಾಜೆ,ಆರೋಗ್ಯ ಕಾರ್ಯದರ್ಶಿಯಾಗಿ ಹನೀಫ್ ಸೂರಿಕುಮೇರ್, ಸಂಘಟನಾ ಕಾರ್ಯದರ್ಶಿಯಾಗಿ ಶಬೀರ್ ಕಡೇಶ್ವಾಲ್ಯ ಮತ್ತು ಮಾಧ್ಯಮ ಕಾರ್ಯದರ್ಶಿಯಾಗಿ ನವಾಝ್ ಇಂಜಿನಿಯರ್ ಆಯ್ಕೆಯಾದರು.
ಇದೇ ವೇಳೆ ಇತ್ತೀಚೆಗೆ ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸಾಧನೆ ಮಾಡಿದ ಪೆರಾಜೆ ಗ್ರಾಮದ ಬುಡೋಳಿ ನಿವಾಸಿಗಳಾದ ಸಿರಾಜುದ್ಧೀನ್ ಮತ್ತು ಸಂಶುದ್ಧೀನ್ ಸಹೋದರರನ್ನು ಸನ್ಮಾನಿಸಲಾಯಿತು.
ಜೈನುಲ್ ಅಕ್ಬರ್ ಸಂಘಟನೆಯ ವಾರ್ಷಿಕ ವರದಿ ಮಂಡಿಸಿದರು.ರಶೀದ್ ನೀರಪಾದೆ ಲೆಕ್ಕಪತ್ರಗಳನ್ನು ಮಂಡಿಸಿದರು.
ರಿಯಾಝ್ ಕಲ್ಲಾಜೆ ಮತ್ತು ಗಫ್ಫೂರ್ ಬುಡೋಳಿ ಸಂಘಟನೆಯ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು.
ಸಲಹಾ ಸಮಿತಿ ಸದಸ್ಯರಾದ ಹನೀಫ್ ಖಾನ್ ಕೊಡಾಜೆ ಕಾರ್ಯಕ್ರಮವನ್ನು ನಿರ್ದೇಶಿಸಿದರು.ಹಿರಿಯ ಪತ್ರಕರ್ತರಾದ ಬದ್ರುದ್ಧೀನ್ ಮಾಣಿ ಶಿಕ್ಷಣದ ಮಹತ್ವ ಮತ್ತು ಸಮುದಾಯ ಸಬಲೀಕರಣದ ಬಗ್ಗೆ ಮಾತನಾಡಿದರು.ಸಲಹಾ ಸಮಿತಿ ಸದಸ್ಯರಾದ ಹಾಜಿ ಉಮರ್ ರಾಜ್ ಕಮಲ್ ಮತ್ತು ಹಾಜಿ ಮುಹಮ್ಮದ್ ರಫೀಕ್ ಉಪಸ್ಥಿತರಿದ್ಧರು.ಅಝೀಝ್ ಗಡಿಯಾರ ಕಾರ್ಯಕ್ರಮ ನಿರೂಪಿಸಿದರು.