ಆಟೋ ಚಾಲಕರಿಂದ ಸಮಾಜಮುಖಿ ಕಾರ್ಯ ಶ್ಲಾಘನೀಯ: ವಕೀಲ ರಾಘವೇಂದ್ರ ರಾವ್

ಮಂಗಳೂರು , ಆ.19:ಜೀವನ ನಿರ್ವಹಣೆಗಾಗಿ ಇಲೆಕ್ಟ್ರಿಕಲ್ ಆಟೋ ಹೊಂದಿರುವ ಚಾಲಕರು ಮತ್ತು ಮಾಲೀಕರು ಸಂಘಟಿತರಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಯೂತ್ ಇಲೆಕ್ಟ್ರಿಕಲ್ ಆಟೋ ಚಾಲಕರ -ಮಾಲಕರ ಸಂಘದ ಗೌರವ ಸಲಹೆಗಾರ , ವಕೀಲ ರಾಘವೇಂದ್ರ ರಾವ್ ಹೇಳಿದ್ದಾರೆ.
ನಗರದ ಬೋಳೂರಿನ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ಕಟ್ಟಡದಲ್ಲಿ ಯೂತ್ ಇಲೆಕ್ಟ್ರಿಕಲ್ ಆಟೋ ಚಾಲಕರ -ಮಾಲೀಕರ ಸಂಘದ ಕಚೇರಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ ಸಂಘಟನೆ ಯಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ನೂತನ ಕಚೇರಿ ಉದ್ಘಾಟಿಸಿ ಶುಭ ಹಾರೈಸಿದರು. ವಕೀಲ ಯಶೋಧರ.ಪಿ ಕರ್ಕೇರ, ಮಾಜಿ ಕಾರ್ಪೋರೇಟರ್ ಜಗದೀಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಮೋದ್ ಪೂಜಾರಿ, ಅನಿಲ್ ಕುಮಾರ್, ಪ್ರಮೋದ್ ಕುಮಾರ್, ರವಿರಾಜ್ ಶೆಟ್ಟಿ ,ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷ ಕೃಷ್ಣಕುಮಾರ್, ಮೊಗವೀರ ಮಹಿಳಾ ಮಂಡಳಿಯ ಅಧ್ಯಕ್ಷೆ ಯೋಗಿನಿ, ಶರುಣ್ ಮಥಾಯಸ್, ರಿಯಾಜ್ ಮಲ್ಲೂರು, ಲೋಹಿತ್, ರವಿಚಂದ್ರ, ಮೇಘ ಪುತ್ರನ್, ಸುಮಿತ್ರ ವಿಶ್ವನಾಥ್, ಜಾನ್.ಎಂ.ಟಿ., ರಿತೇಶ್ ಫೆರ್ನಾಂಡಿಸ್, ನಿತೇಶ್ ಪೂಜಾರಿ, ಮೆಹಬೂಬ್ ಉಪಸ್ಥಿತರಿದ್ದರು. ಯೂತ್ ಇಲೆಕ್ಟ್ರಿಕಲ್ ಆಟೋ ಚಾಲಕರ -ಮಾಲೀಕರ ಸಂಘದ ಅಧ್ಯಕ್ಷ ರಾಕೇಶ್ ರಾವ್ ಸ್ವಾಗತಿಸಿದರು.







