ಸೋಮೇಶ್ವರ ಪುರಸಭೆ ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಉಳ್ಳಾಲ : ಸೋಮೇಶ್ವರ ಗ್ರಾ.ಪಂ.ಪುರಸಭೆಯಾಗಿ ಮೇಲ್ದರ್ಜೆ ಗೇರಿದ ಕಾರಣ ನಗರೋತ್ಥಾನ ಯೋಜನೆ ಬಂದಿದೆ.ಇದೀಗ ಪುರಸಭೆ ಗೆ ನೂತನ ವಾಗಿ ನಿರ್ಮಾಣವಾಗುವ ಕಟ್ಟಡ ಸುಸಜ್ಜಿತ ಆಗಬೇಕು ಎಂಬ ಗುರಿ ಇಟ್ಟು ಕೊಂಡಿದ್ದೇವೆ.ಇದಕ್ಕಾಗಿ ಈ ಕಟ್ಟಡದ ನಕ್ಷೆಯನ್ನು ಕೂಡ ಮೂರು ಬಾರಿ ಬದಲಾಯಿಸಲಾಗಿದೆ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು
ಅವರು ಸೋಮೇಶ್ವರ ಪುರಸಭೆಗೆ ಎರಡು ಕೋಟಿ ಅನುದಾನದಲ್ಲಿ ನಿರ್ಮಾಣ ಆಗಲಿರುವ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಗುತ್ತಿಗೆ ವಹಿಸಿ ಕೊಂಡವರು ತುರ್ತು ಮಾಡದೇ ಉತ್ತಮ ಗುಣಮಟ್ಟದ ಕಾಮಗಾರಿ ಮೂಲಕ ಕಟ್ಟಡ ನಿರ್ಮಾಣ ಮಾಡಬೇಕು. ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಕೆಲವು ಕಡೆ ವಿದ್ಯುತ್ ಕೇಬಲ್ ಕಾಮಗಾರಿ ಅಪೂರ್ಣ ವಾಗಿದೆ.ವಿದ್ಯುತ್, ಕುಡಿಯುವ ನೀರು ಪೈಪ್ ಲೈನ್ ಕಾಮಗಾರಿ ವಿಳಂಬ ಆಗಬಾರದು.ಇವೆರಡೂ ನಮಗೆ ಅಗತ್ಯ ಇದೆ. ಈ ಕಾಮಗಾರಿಯ ಪರಿಶೀಲನೆ ನಿರಂತರ ನಡೆಯಬೇಕು. ವಿದ್ಯುತ್ ಗೆ ಸಂಬಂಧಿಸಿದಂತೆ ಮೆಸ್ಕಾಂ ಗೆ ಪ್ರತ್ಯೇಕ ಸ್ಥಳಾವಕಾಶ ನೀಡಬೇಕು ಎಂದು ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮೇಶ್ವರವನ್ನು ಪ್ರವಾಸಿಗರ ಆಕರ್ಷಣೆಯ ಕೇಂದ್ರ ಮಾಡುವ ದೃಷ್ಟಿಯಿಂದ ಉಚ್ಚಿಲ ಮತ್ತು ಸೋಮೇಶ್ವರ ದಲ್ಲಿ ರೈಲ್ವೆ ಹಳಿಯಲ್ಲಿ ಅಂಡರ್ ಪಾಸಿಂಗ್ ರಸ್ತೆ ನಿರ್ಮಾಣಕ್ಕೆ ಕೈಜೋಡಿಸುವಂತೆ ಸಂಸದ ಬ್ರಿಜೇಶ್ ಚೌಟ ಅವರಲ್ಲಿ ಈ ಸಂದರ್ಭದಲ್ಲಿ ವಿನಂತಿಸಿದರು.
ಸಂಸದ ಬ್ರಿಜೇಶ್ ಚೌಟ ಮಾತನಾಡಿ,ಈ ಕಟ್ಟಡ ಮೊದಲೇ ಆಗಬೇಕಾಗಿದ್ದು,ಈ ಕಟ್ಟಡ ನಿರ್ಮಾಣ ಕ್ಕೆ 2021 ರಲ್ಲೇ ನಗರೋತ್ಥಾನ ಯೋಜನೆ ಯಡಿ ಎರಡು ಕೋಟಿ ಬಿಡುಗಡೆ ಆಗಿದೆ. ಕಟ್ಟಡ ನಿರ್ಮಾಣ ಕಾಮಗಾರಿ ಯಲ್ಲಿ ಉತ್ತಮ ಗುಣಮಟ್ಟ ಪಾಲನೆ ಆಗಬೇಕು. ಈ ಸೋಮೇಶ್ವರ ಪ್ರವಾಸಿ ಕೇಂದ್ರ ಆಗಬೇಕು.ಇದಕ್ಕಾಗಿ ತನ್ನಿಂದಾಗುವ ಎಲ್ಲಾ ವ್ಯವಸ್ಥೆ ಮಾಡುತ್ತೇನೆ.ಅಭಿವೃದ್ದಿ ನಮ್ಮ ಕಾರ್ಯಾಗಾರ ಆಗಬೇಕು ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಕಮಲ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ಮತಡಿ ಸ್ವಾಗತಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್,ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಪುರಸಭೆ ವಿರೋಧ ಪಕ್ಷದ ನಾಯಕ ಪುರುಷೋತ್ತಮ ಪಿಲಾರ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ, ಬಿಜೆಪಿ ಮುಖಂಡ ಜಗದೀಶ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.







