Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ನೈರುತ್ಯ ರೈಲ್ವೇಗೆ 6939 ಕೋಟಿ ರೂ. ಆದಾಯ

ನೈರುತ್ಯ ರೈಲ್ವೇಗೆ 6939 ಕೋಟಿ ರೂ. ಆದಾಯ

ವಾರ್ತಾಭಾರತಿವಾರ್ತಾಭಾರತಿ29 Jan 2026 9:39 PM IST
share
ನೈರುತ್ಯ ರೈಲ್ವೇಗೆ 6939 ಕೋಟಿ ರೂ. ಆದಾಯ

ಮಂಗಳೂರು: ನೈರುತ್ಯ ರೈಲ್ವೇ (ಸೌತ್ ವೆಸ್ಟರ್ನ್ - ಎಸ್‌ಡಬ್ಲ್ಯುಆರ್)ಯು ಪ್ರಸಕ್ತ ಹಣಕಾಸು ವರ್ಷದಲ್ಲಿ 6,939 ಕೋಟಿ ರೂ. ಆದಾಯ ಗಳಿಸುವ ಮೂಲಕ ಶೇ. 16ರಷ್ಟು ಪ್ರಗತಿ ದಾಖಲಿಸಿದೆ ಎಂದು ಪ್ರಧಾನ ವ್ಯವಸ್ಥಾಪಕರಾದ ಮುಕುಲ್ ಸರನ್ ಮಾಥುರ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೇ ವತಿಯಿಂದ ನಡೆದ ಗಣರಾಜ್ಯೋತ್ಸವ ಸಂದರ್ಭ, 2025-26ನೇ ಸಾಲಿನ ಮೊದಲ ಮೂರು ತ್ರೈಮಾಸಿಕಗಳಲ್ಲಿ ನೈಋತ್ಯ ರೈಲ್ವೆಯ ವಿವಿಧ ಸಾಧನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಪ್ರಯಾಣಿಕರ ವಿಭಾಗದಲ್ಲಿ ಸಾರ್ವಕಾಲಿಕ ಗರಿಷ್ಠ 2,543 ಕೋಟಿ ಆದಾಯ ಗಳಿಸಿದ್ದರೆ, ಸರಕು ವಿಭಾಗದಲ್ಲಿ ಡಿಸೆಂಬರ್ ವರೆಗೆ ದಾಖಳೆಯ 3,976 ಕೋಟಿ ರೂ. ಆದಾಯ ಗಳಿಸಲಾಗಿದೆ. ಪಾರ್ಸೆಲ್ ಮೂಲಕ 129 ಕೋಟಿ ರೂ. ಹಾಗೂ ವಿವಿಧ ಮೂಲಗಳಿಂದ ಶೇ. 21ರಷ್ಟು ಬೆಳವಣಿಗೆ ಆಗಿರುವುದಾಗಿ ಅವರು ತಿಳಿಸಿದ್ದಾರೆ.

ಸರಕು ಸಾಗಾಟದಲ್ಲಿ ಅಗ್ರಸ್ಥಾನ

ಸರಕು ಸಾಗಣೆ ಕ್ಷೇತ್ರದಲ್ಲಿ ನೈಋತ್ಯ ರೈಲ್ವೆ ಮುಂಚೂಣಿಯಲ್ಲಿದ್ದು, ಶೇ. 18.5ರಷ್ಟು ಬೆಳವಣಿಗೆಯೊಂದಿಗೆ 38 ಮಿಲಿಯನ್ ಟನ್ ಲೋಡಿಂಗ್ ಗುರಿ ಮುಟ್ಟಿದೆ. 2025ರ ಡಿಸೆಂಬರ್‌ನಲ್ಲಿ 5.1 ಮಿಲಿಯನ್ ಟನ್ ಲೋಡಿಂಗ್ ಮಾಡುವ ಮೂಲಕ ಮಾಸಿಕ ದಾಖಲೆ ಬರೆದಿದೆ. ಇದರಲ್ಲಿ ಹುಬ್ಬಳ್ಳಿ ವಿಭಾಗದ ಪಾಲು ಅತ್ಯಂತ ದೊಡ್ಡದಾಗಿದ್ದು (3.8 ಮಿಲಿಯನ್ ಟನ್).

ಮೂಲಸೌಕರ್ಯ ಹಾಗೂ ಸಾಮರ್ಥ್ಯ ವಿಸ್ತರಣೆ

ರೈಲ್ವೆ ಜಾಲದ ಬಲವರ್ಧನೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದ್ದು, 26 ಕಿ.ಮೀ. ಜೋಡಿ ಮಾರ್ಗ ಕಾಮಗಾರಿ ಚಾಲನೆ ಹಾಗೂ 20 ಕಿ.ಮೀ. ಹೊಸ ಮಾರ್ಗಗಳಿಗೆ ಅನುಮೋದನೆ ನೀಡಲಾಗಿದೆ. ತಳಕಲ್ - ಕುಷ್ಟಗಿ ನಡುವಿನ 56 ಕಿ.ಮೀ. ಹೊಸ ಮಾರ್ಗ ರಾಷ್ಟ್ರಕ್ಕೆ ಸಮರ್ಪಣೆ.

1,107 ಕೋಟಿ ರೂ. ಮೊತ್ತದ 190 ಹೊಸ ಕಾಮಗಾರಿಗಳಿಗೆ ಹಾಗೂ 2,264 ಕೋಟಿ ರೂ. ವೆಚ್ಚದ 109 ಆದ್ಯತಾ ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ.

ವಿದ್ಯುದೀಕರಣ ಮತ್ತು ಸುಸ್ಥಿರ ಇಂಧನ

ಪರಿಸರ ಸ್ನೇಹಿ ಸಾರಿಗೆಗೆ ಒತ್ತು ನೀಡುತ್ತಿರುವ ನೈರುತ್ಯ ರೈಲ್ವೆಯ ಶೇ. 90ರಷ್ಟು ಜಾಲ (3,340 ಕಿ.ಮೀ.) ವಿದ್ಯುದೀಕರಣಗೊಂಡಿದೆ. ಇದರಿಂದ ಸುಮಾರು 39 ಕೋಟಿ ರೂ. ಡೀಸೆಲ್ ವೆಚ್ಚ ಉಳಿತಾಯವಾಗಿದೆ. ಸೌರಶಕ್ತಿ ಬಳಕೆಯಲ್ಲೂ ದಾಪುಗಾಲು ಇಟ್ಟಿದ್ದು, ಒಟ್ಟು ಸೌರ ಸಾಮರ್ಥ್ಯವನ್ನು 7.6 ಎಂಡಬ್ಲ್ಯುಪಿಗೆ ಹೆಚ್ಚಿಸಲಾಗಿದೆ. ಮುಕ್ತ ಪ್ರವೇಶ ವಿದ್ಯುತ್ ಮತ್ತು ಎಚ್‌ಒಜಿ ವ್ಯವಸ್ಥೆಯಿಂದ ಒಟ್ಟಾರೆ 295 ಕೋಟಿ ರೂ. ಇಂಧನ ವೆಚ್ಚ ಉಳಿತಾಯವಾಗಿದೆ.

ಪ್ರಯಾಣಿಕರ ಸೇವೆ ಮತ್ತು ಸುರಕ್ಷತೆ

ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಶೇ. 90ರಷ್ಟು ಸಮಯಪಾಲನೆ ಕಾಯ್ದುಕೊಳ್ಳುವ ಮೂಲಕ ರಾಷ್ಟ್ರಮಟ್ಟ ದಲ್ಲಿ 4ನೇ ಸ್ಥಾನ ಪಡೆದಿದೆ. ಬೇಡಿಕೆಗೆ ತಕ್ಕಂತೆ 481 ವಿಶೇಷ ರೈಲುಗಳು ಹಾಗೂ 614 ಹೆಚ್ಚುವರಿ ಬೋಗಿಗಳ ವ್ಯವಸ್ಥೆ ಮಾಡಲಾಗಿದೆ.

ಕವಚ್ ವ್ಯವಸ್ಥೆ: ಸುರಕ್ಷತೆಗಾಗಿ 3,692 ಕಿ.ಮೀ. ವ್ಯಾಪ್ತಿಯಲ್ಲಿ ‘ಕವಚ್’ (ರೈಲು ಡಿಕ್ಕಿ ತಡೆ ವ್ಯವಸ್ಥೆ) ಅಳವಡಿಸಲು ಅನುಮೋದನೆ ನೀಡಲಾಗಿದೆ. 2 ವಂದೇ ಭಾರತ್ ಸೇರಿದಂತೆ 10 ಹೊಸ ರೈಲುಗಳ ಸೇವೆ ಆರಂಭಿಸಲಾಗಿದೆ.

ಭದ್ರತೆ ಮತ್ತು ಸಾಮಾಜಿಕ ಹೊಣೆಗಾರಿಕೆ

ರೈಲ್ವೆ ಸುರಕ್ಷತಾ ಬಲ (ಆರ್‌ಪಿಎಫ್) ‘ಆಪರೇಷನ್ ನನ್ಹೆ ಫರಿಸ್ತೆ’ ಅಡಿಯಲ್ಲಿ 487 ಮಕ್ಕಳು ಮತ್ತು 54 ದುರ್ಬಲರನ್ನು ರಕ್ಷಿಸಿದೆ. ‘ಮೇರಿ ಸಹೇಲಿ’ ಯೋಜನೆಯಡಿ 3.3 ಲಕ್ಷ ಮಹಿಳಾ ಪ್ರಯಾಣಿಕರಿಗೆ ನೆರವು ನೀಡಲಾ ಗಿದೆ. ನಿಗಾ ವ್ಯವಸ್ಥೆಗಾಗಿ 164 ನಿಲ್ದಾಣಗಳಲ್ಲಿ 2,179 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ದೇಶದ ಸರ್ವತೋಮುಖ ಪ್ರಗತಿಗೆ ಹೆಗಲು ಕೊಡುತ್ತಿರುವ ನೈಋತ್ಯ ರೈಲ್ವೆಯು, ಆಧುನಿಕ ಮೂಲಸೌಕರ್ಯ ಹಾಗೂ ಪ್ರಯಾಣಿಕರ ಸುರಕ್ಷಿತ ಪ್ರಯಾಣಕ್ಕೆ ಸದಾ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

‘ರೈಲುಗಳ ವೇಗ ಹೆಚ್ಚಿಸುವ ನಿಟ್ಟಿನಲ್ಲಿ 360 ಟ್ರ್ಯಾಕ್ ಕಿಲೋಮೀಟರ್‌ಗಳಲ್ಲಿ ವಿಭಾಗೀಯ ವೇಗವನ್ನು 110 ಕಿ.ಮೀ.ಗೆೆ ಏರಿಸಲಾಗಿದೆ. ಲೂಪ್ ಲೈನ್ ಹಾಗೂ ಹಾಸನ- ಮಂಗಳೂರು ವಿಭಾಗದ ವೇಗವನ್ನೂ ಹೆಚ್ಚಿಸಲಾಗಿದ್ದು(ಘಾಟ್ ವಿಭಾಗ ಹೊರತುಪಡಿಸಿ ), 240 ಕಿ.ಮೀ. ಹಳಿಯನ್ನು 25-ಟನ್ ಆಕ್ಸಲ್ ಲೋಡ್ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಲಾಗಿದೆ.’

ಮುಕುಲ್ ಸರನ್ ಮಾಥುರ್, ಪ್ರಧಾನ ವ್ಯವಸ್ಥಾಪಕರು, ನೈರುತ್ಯ ರೈಲ್ವೇ.

Tags

SouthWesternRailwayrevenue
share
ವಾರ್ತಾಭಾರತಿ
ವಾರ್ತಾಭಾರತಿ
Next Story
X