ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಜೋಕಟ್ಟೆ ಆಝಾದ್ ಯೂತ್ ಕಲ್ಚರಲ್ ಅಸೋಸಿಯೇಷನ್‌ಗೆ ಅಭಿನಂದಿಸಿದ ಸ್ಪೀಕರ್ ಯುಟಿ ಖಾದರ್

ಬೆಂಗಳೂರು: ಸಮಾಜ ಸೇವೆ, ಕ್ರೀಡೆ, ಆರೋಗ್ಯ, ಸಾಂಸ್ಕೃತಿಕ ಕ್ಷೇತ್ರ, ಜೊತೆಗೆ ಆಂಬುಲೆನ್ಸ್ ಮತ್ತು ಆಕ್ಸಿಜನ್ ಸೇವೆಯಲ್ಲಿ 25 ವರ್ಷಗಳಿಂದ ಸತತ ಸೇವೆ ಸಲ್ಲಿಸುತ್ತಿರುವ ಜೋಕಟ್ಟೆ ಆಝಾದ್ ಯೂತ್ ಕಲ್ಚರಲ್ ಅಸೋಸಿಯೇಷನ್ ಸಂಸ್ಥೆಗೆ ನೀಡಲಾದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರದ ಹಿನ್ನಲೆಯಲ್ಲಿ, ಕರ್ನಾಟಕ ವಿಧಾನಸಭಾಧ್ಯಕ್ಷ ಯು. ಟಿ.ಖಾದರ್ ಫರೀದ್ ಅವರು ವಿಧಾನಸೌಧದ ಸ್ಪೀಕರ್ ಕಚೇರಿಯಲ್ಲಿ ಸಂಸ್ಥೆಯ ಅಧ್ಯಕ್ಷ ಅಭಿಲ್ ಜೋಕಟ್ಟೆ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ಪೀಕರ್ ಅವರು, “ಇಂದಿನ ಯುವಕರಲ್ಲಿ ಸಮಾಜಸೇವೆಯ ಮನೋಭಾವನೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ, ಅಜಾದ್ ಸಂಸ್ಥೆಯ ಸೇವೆ ರಾಜ್ಯಕ್ಕೆ ಮಾದರಿಯಾಗಿದೆ” ಎಂದು ಪ್ರಶಂಸಿಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಅಂಜುಮಾನ್ ಖುವ್ವತುಲ್ ಇಸ್ಲಾಂ ಅಧ್ಯಕ್ಷ ಸುಲೈಮಾನ್ ಹಾಜಿ ಬೊಟ್ಟು, ಮೀಫ್ ಶೈಕ್ಷಣಿಕ ಒಕ್ಕೂಟ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ, ಸುಳ್ಯ ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
Next Story





