ಬೆಂಗಳೂರು ವಿವಿಯಿಂದ ಡಾಕ್ಟರೇಟ್ ಪದವಿ ಪಡೆದ ಸ್ಪೀಕರ್ ಯು.ಟಿ.ಖಾದರ್‌ಗೆ ಬ್ಯಾರೀಸ್ ವೆಲ್ಫೇರ್ ಫೋರಂ ವತಿಯಿಂದ ಸನ್ಮಾನ

ಮಂಗಳೂರು: ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ ಇದರ ವತಿಯಿಂದ ಇತ್ತೀಚಿಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯಿಂದ ಗೌರವಿಸಲ್ಪಟ್ಟ ಸ್ಪೀಕರ್ ಡಾ. ಯು .ಟಿ . ಖಾದರ್ ಫರೀದ್ ಅವರನ್ನು ಸರಳ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿ ಡಬ್ಲ್ಯೂ ಫ್ ಅಧ್ಯಕ್ಷ ಮಹಮ್ಮದ್ ಅಲಿ ಉಚ್ಚಿಲ್ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿ ತುಂಬು ಹೃದಯದ ಹಾರೈಕೆ ಸಲ್ಲಿಸಿದರು.
ಎಸ್ ಎಂ ರಶೀದ್ ಹಾಜಿ, ಯು ಚ್ ಉಮರ್, ನಾಸಿರ್ ಲಕ್ಕಿ ಸ್ಟಾರ್, ಹನೀಫ್ ಉಳ್ಳಾಲ್ ಮತ್ತು ಇಕ್ವಾನ್ ಅಹ್ಮದ್ ಉಪಸ್ಥಿತರಿದ್ದರು. ಡಾ । ಯು .ಟಿ .ಖಾದರ್ ರವರು ಸನ್ಮಾನಕ್ಕೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದರು.
Next Story





