ಎಸ್ಸೆಸ್ಸೆಲ್ಸಿ ಪರೀಕ್ಷೆ: ಮಿತ್ತೂರು ದಾರುಲ್ ಇರ್ಶಾದ್ ಗೆ 100 ಶೇ. ಫಲಿತಾಂಶ

ಬಂಟ್ವಾಳ: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಮಿತ್ತೂರಿನ ದಾರುಲ್ ಇರ್ಶಾದ್ ಬಾಲಕರ ವಸತಿಯುತ ಪ್ರೌಢಶಾಲೆಯು 100 ಶೇ. ಫಲಿತಾಂಶ ದಾಖಲಿಸಿದೆ.
ಶೇ 91.84 ಸಮಾನ ಅಂಕಗಳನ್ನು ಪಡೆದಿರುವ ಇಬ್ರಾಹೀಂ ಖಲೀಲ್ ಕಡಬ ಹಾಗೂ ಮುಹಮ್ಮದ್ ಹಾಶಿರ್ ಬೆಳ್ಮ ಶಾಲೆಗೆ ಪ್ರಥಮ ಸ್ಥಾನಿಗಳಾದರೆ, 90.56 ಶೇ ಅಂಕಗಳನ್ನು ಪಡೆದಿರುವ ಮುಹಮ್ಮದ್ ರಾಝಿ ಗಡಿಯಾರ್ ದ್ವಿತೀಯ, ಮುಹಮ್ಮದ್ ಸಹಲ್ ಮುರ ಹಾಗೂ ಸುಹೈಲ್ ಕಾವು ಶೇ.90.08ಗಳನ್ನು ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ.
11 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 22 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಶಾಲೆಯ ಪ್ರಕಟನೆ ತಿಳಿಸಿದೆ.
Next Story





