ರಾಜ್ಯ ಮಟ್ಟದ ಅಲ್ ಬಿರ್ರ್ ಶಾಲೆಗಳ ವಿಜ್ಞಾನ ಮೇಳ ಹಾಗೂ ಕಲಾ ಸ್ಪರ್ಧೆ

ಮೂಡಬಿದ್ರೆ : ರಾಜ್ಯ ಮಟ್ಟದ ಅಲ್ ಬಿರ್ರ್ ಶಾಲೆಗಳ ವಿಜ್ಞಾನ ಮೇಳ ಹಾಗೂ ಕಲಾ ಸ್ಪರ್ಧೆಯು ಆಜುಮ್ ಅಲ್ ಬಿರ್ರ್ ಶಾಲೆ ಮೂಡಬಿದ್ರೆಯಲ್ಲಿ ನಡೆಯಿತು.
ಸಯ್ಯಿದ್ ಅಕ್ರಮ್ ಅಲಿ ತಂಙಳ್ ಉದ್ಘಾಟನೆ ನೆರವೇರಿಸಿದರು. ಬದ್ರಿಯಾ ಜುಮಾ ಮಸೀದಿ ಮೂಡಬಿದ್ರೆ ಖತೀಬ್ ಶರೀಫ್ ದಾರಿಮಿ ಶುಭಹಾರೈಸಿದರು.
ಅಲ್ ಬಿರ್ರ್ ವಿದ್ಯಾರ್ಥಿ ಝೈನುಲ್ ಆಬಿದೀನ್ ಕಿರಾಅತ್ ಪಠಿಸಿದರು. ಅಲ್ ಬಿರ್ರ್ ಜಿಲ್ಲಾ ಕೋಡಿನೇಟರ್ ಶುಕೂರ್ ದಾರಿಮಿ ಕರಾಯ,ಬದ್ರಿಯಾ ಜುಮ್ಮಾ ಮಸೀದಿ ಟೌನ್ ಅಧ್ಯಕ್ಷ ಅಬ್ಬುವಾಕ, ಲಾಡಿ ಜುಮ್ಮಾ ಮಸೀದಿ ಖತೀಬ್ ಫಾಯಿಝ್ ಫೈಝಿ,
ಆಜುಮ್ ಅಲ್ ಬಿರ್ರ್ ಇಂಟರ್ನ್ಯಾಷನಲ್ ಸ್ಕೂಲ್ ನ ಕಾರ್ಯದರ್ಶಿ ಮಾಲಿಕ್ ಅಝೀಝ್, ಖಜಾಂಚಿ ಇರ್ಫಾನ್, ಟ್ರಸ್ಟಿನ ಸದಸ್ಯರಾದ ಅಲ್ತಾಫ್ ಗಂಟಲಕಟ್ಟೆ, ಶಮೀಮ್ ಅಳಿಯೂರ್, ಉದ್ಯಮಿ ಗಳಾದ ಅಹಮದ್ ಹುಸೇನ್,ಗಫೂರ್ ಕೋಟೆಬಾಗಿಲು ಅಶ್ರಫ್ ಮರೋಡಿ, ಶೇಕ್ ಮೋನು ಅಡ್ಡೂರು, ಅಬ್ದುಲ್ ಖಾದರ್ ಅಡ್ಡೂರು, ಸಿತಾರ್ ಮಜೀದ್ ಹಾಜಿ ಕಣ್ಣೂರ್, ಅಲ್ತಾಫ್ ಲೊರೆಟ್ಟೊಪದವು, ಶಾಫಿ ಪುತ್ತೂರು, ಬಾತೀಶ್ ಹಾಜಿ ಪುತ್ತೂರು,ಅಲ್ ಬಿರ್ರ್ ಕೇಂದ್ರ ಸಮಿತಿ ನಾಯಕರಾದ ನವಾಝ್ ವಯಟ್ಟಿಲ,ಫಿರೋಝ್ ಗಝ್ಝಾಲಿ, ಫಝಲುರಹ್ಮಾನ್, ಶಫೀರುದ್ದೀನ್, ನಈಮ್, ಮೂಡಬಿದ್ರೆ ಅಲ್ ಬಿರ್ರ್ ಅಧ್ಯಾಪಕ ರಾದ ಸಫ್ವಾನ್ ಬಾಖವಿ, ಮುಸ್ತಫಾ ಫೈಝಿ ಕಿನ್ಯ, ಹಫೀಜ್ ಅನ್ಸಾರಿ, ಆರಿಫ್ ಕಮ್ಮಾಜೆ ಕೈಕಂಬ ಇವರು ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದರು
ವಿಜ್ಞಾನ ಮೇಳದಲ್ಲಿ ಅಡ್ಡೂರು ಅಲ್ ಬಿರ್ರ್ ಶಾಲೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಮೂಡಬಿದ್ರೆ ಅಲ್ ಬಿರ್ರ್ ಶಾಲೆ ಹಾಗೂ ಕೈಕಂಬ ಅಲ್ ಬಿರ್ರ್ ಶಾಲೆ ರನ್ನರ್ ಅಪ್ ಪಡೆದುಕೊಂಡಿದೆ.
ಜಿಲ್ಲಾ ಮಟ್ಟದ ಅಲ್ ಬಿರ್ರ್ ಕಿಡ್ಸ್ ಫೆಸ್ಟ್ ಜ.4 ರಂದು ಮೂಡಬಿದ್ರೆ ಅಲ್ ಬಿರ್ರ್ ಶಾಲೆಯಲ್ಲಿ ನಡೆಯಲಿದ್ದು, ಸಮಸ್ತ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ಮುತ್ತು ಕೋಯ ತಂಙಳ್ ಉದ್ಘಾಟನೆ ನೆರವೇರಿಸಲಿದ್ದಾರೆ.







