ರಾಜ್ಯಮಟ್ಟದ ಸ್ಪೀಡ್ ಸ್ಕೇಟಿಂಗ್ ಟ್ರಯಲ್ಸ್: ದ.ಕ ಜಿಲ್ಲೆಗೆ 17 ಚಿನ್ನ, 16 ಬೆಳ್ಳಿ, 25 ಕಂಚಿನ ಪದಕ

ಮಂಗಳೂರು: ನಗರದ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಇತ್ತೀಚೆಗೆ ನಡೆದ 39ನೇ ಕರ್ನಾಟಕ ಸ್ಪೀಡ್ ಸ್ಕೇಟಿಂಗ್ ಆಯ್ಕೆ ಟ್ರಯಲ್ಸ್‌ನಲ್ಲಿ ದ.ಕ. ಜಿಲ್ಲೆ 17 ಚಿನ್ನ, 16 ಬೆಳ್ಳಿ ಮತ್ತು 25 ಕಂಚಿನ ಪದಕಗಳನ್ನು ಗಳಿಸಿದೆ.
ಜಿಲ್ಲೆಯ ಸ್ಕೇಟರ್‌ಗಳಾದ ಮುಹಮ್ಮದ್ ಶಾಮಿಲ್ ಅರ್ಷದ್ 4 ಚಿನ್ನ, ಡ್ಯಾಶಿಯೆಲ್ ಅಮಂಡಾ ಕಾನ್ಸೆಸ್ಸಾವೊ 3 ಚಿನ್ನ, 1 ಬೆಳ್ಳಿ, ಡೇನಿಯಲ್ ಸಾಲ್ವಡಾರ್ 2 ಚಿನ್ನ, 2 ಕಂಚು, ಶ್ರೇಷ್ಠ ಪಿ ಶೆಣೈ 2 ಚಿನ್ನ, ಜೆಸ್ನಿಯಾ ಕೊರಿಯಾ 2 ಚಿನ್ನ, 1 ಬೆಳ್ಳಿ, ಹಿಮಾನಿ 1 ಚಿನ್ನ, 1 ಬೆಳ್ಳಿ, 1 ಕಂಚು, ವಿವೇಕ್ 1 ಚಿನ್ನ, 1 ಬೆಳ್ಳಿ, ಕೃತಿ 1 ಚಿನ್ನ, 1 ಬೆಳ್ಳಿ, ಮುಹಮ್ಮದ್ ಅಯಾನ್ 1 ಚಿನ್ನ, 2 ಕಂಚು, ತನ್ಮಯ್ ಎಂ. ಕೊಟ್ಟಾರಿ 2 ಬೆಳ್ಳಿ, 1 ಕಂಚು, ಅನಘಾ ರಾಜೇಶ್ 2 ಬೆಳ್ಳಿ, 1 ಕಂಚು ಗೆದ್ದುಕೊಂಡಿದ್ದಾರೆ.
ಹನ್ನಾ ರೋಸ್ ಫೆರ್ನಾಂಡಿಸ್ 2 ಬೆಳ್ಳಿ, 1 ಕಂಚು, ಶಿವಂ ವೈಎನ್ 1 ಬೆಳ್ಳಿ, 1 ಕಂಚು, ಜೆನಿಶಾ 1 ಬೆಳ್ಳಿ, 1 ಕಂಚು, ಅರ್ನಾ ರಾಜೇಶ್ 1 ಬೆಳ್ಳಿ, ತಸ್ಮಯಿ ಎಂ. ಶೆಟ್ಟಿ 1 ಬೆಳ್ಳಿ, ಐಶಾನಿ ಸಂತೋಷ್ 1 ಬೆಳ್ಳಿ, ಶುಭ್ರಾ ಜೋತ್ಸ್ನಾ ಎಸ್. ಅಡ್ಡೂರ್ 3 ಕಂಚು, ಶಲೋಮ್ ಕ್ರಿಸ್ಟನ್ 2 ಕಂಚು, ಲಕ್ಷ್ 2 ಕಂಚು, ಕೇಟ್ ಅರ್ವಿ ವಾಜ್ 1 ಕಂಚು, ಡೇವಿಡ್ ಆಚಾರ್ಯ 1 ಕಂಚು, ನಿರ್ಮಯ್ ವೈ. ಎನ್ 1 ಕಂಚು, ದೀಕ್ಷಾ ಉಡುಪ 1 ಕಂಚು, ಅರ್ಜುನ್ ಆರ್. ಕೋಟ್ಯಾನ್ 1 ಕಂಚು, ಯುವರಾಜ್ ಡಿ. ಕುಂದರ್ 1 ಕಂಚು, ಧೃತಿ ಅಮೀನ್ 1 ಕಂಚು, ಅಮೋರಾ ಎಲೆನಾ ಟೌರೊ 1 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಇವರು ಹೈ-ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್, ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್, ದೇವ ಹಂಸ ರೋಲರ್ ಸ್ಕೇಟಿಂಗ್ ಕ್ಲಬ್ ಮತ್ತು ಕುಡ್ಲ ಸ್ಕೇಟಿಂಗ್ ಕ್ಲಬ್‌ಗೆ ಸೇರಿದ ಸ್ಕೇಟರ್ಸ್‌ಗಳಾಗಿದ್ದಾರೆ.
ಈ ಟ್ರಯಲ್ಸ್ ಮೂಲಕ 61ನೇ ರಾಷ್ಟ್ರೀಯ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಲು ದ.ಕ. ಜಿಲ್ಲೆಯ 11 ಸ್ಕೇಟರ್ಸ್‌ಗಳಾದ ಶಾಮೀಲ್, ಡ್ಯಾಶಿಲ್, ಡೇನಿಯಲ್, ಹಿಮಾನಿ, ವಿವೇಕ್, ಶಿವಮ್, ಶ್ರೇಷ್ಠ, ಜೆಸ್ನಿಯಾ, ಕೃತಿ, ಹನ್ನಾ ಮತ್ತು ಅಯಾನ್ ಆಯ್ಕೆಯಾಗಿದ್ದಾರೆ ಎಂದು ಡಿಕೆಆರ್‌ಎಸ್‌ಎ ಅಧ್ಯಕ್ಷ ಫ್ರಾನ್ಸಿಸ್ ತಿಳಿಸಿದ್ದಾರೆ.







