ರಾಜ್ಯಮಟ್ಟದ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್: ಮುಹಮ್ಮದ್‌ಗೆ 2 ಚಿನ್ನ, 1 ಕಂಚು

ಮಂಗಳೂರು, ನ.16: ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ಮತ್ತು ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಶನ ಆಶ್ರಯದಲ್ಲಿ ಇತ್ತೀಚೆಗೆ ನಡೆದ 26ನೇ ರಾಜ್ಯಮಟ್ಟದ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ ನಲ್ಲಿ ಪಾಂಡೇಶ್ವರ ನಿವಾಸಿ ಪಿ. ಎ. ಮುಹಮ್ಮದ್ ಕಾಟಿಪಳ್ಳ ಅವರು 2 ಬೆಳ್ಳಿ, 1 ಕಂಚು ಪದಕ ಪಡೆದಿದ್ದಾರೆ.
ಮುಹಮ್ಮದ್ ಕಾಟಿಪಳ್ಳ ಅವರು 100 ಮೀ ಫ್ರೀ ಸ್ಟೈಲ್, 100 ಮೀ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಎರಡು ಬೆಳ್ಳಿಯ ಪದಕವನ್ನು , 50 ಮೀ ಫ್ರೀ ಸ್ಟೈಲ್ ವೇಗದ ಸ್ವಿಮ್ಮಿಂಗ್ನಲ್ಲಿ ಕಂಚಿನ ಪದಕವನ್ನು ಜಯಿಸಿದರು. ಇದರೊಂದಿಗೆ ಅವರು 2025 ನ. 21ರಿಂದ 23ರ ತನಕ ಹೈದರಾಬಾದ್ ನ ಗಚಿಬೌಲಿಯಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆದಿದ್ದಾರೆ.
Next Story





