ರಾಜ್ಯ ಮಟ್ಟದ ವೇಟ್ ಲಿಫ್ಟಿಂಗ್ ಚಾಂಪಿಯನ್ಶಿಪ್ : ಆಳ್ವಾಸ್ ಕಾಲೇಜು ಚಾಂಪಿಯನ್, ಎಸ್ಡಿಎಂ ಸ್ಫೋರ್ಟ್ ರನ್ನರ್ಸ್

ಸುಳ್ಯ : ಕರ್ನಾಟಕ ರಾಜ್ಯ ವೇಟ್ ಲಿಫ್ಟಿಂಗ್ ಸಂಸ್ಥೆ ಬೆಂಗಳೂರು, ಸುಳ್ಯದ ಸ್ಪೋಟ್ರ್ಸ್ ಮತ್ತು ಆಟ್ರ್ಸ್ ಎಸೋಸಿಯೇಶನ್ ಹಾಗೂ ಕರ್ನಾಟಕ ರಾಜ್ಯ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಸಂಘಟನಾ ವತಿಯಿಂದ ಸುಳ್ಯದಲ್ಲಿ ನಡೆದ ಕರ್ನಾಟಕ ರಾಜ್ಯ ಮಟ್ಟದ ವೇಟ್ ಲಿಫ್ಟಿಂಗ್ ಚಾಂಪಿಯನ್ಶಿಪ್ ಸಮಾಪನಗೊಂಡಿತು.
ಮೂರು ದಿನಗಳ ಕಾಲ ನಡೆದ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನ ಪಂದ್ಯಾಕೂಟದಲ್ಲಿ ಮೂಡಬಿದಿರೆ ಆಳ್ವಾಸ್ ಕಾಲೇಜು 6 ವಿಭಾಗದಲ್ಲಿ ಒಟ್ಟು 1,220 ಅಂಕಗಳನ್ನು ಪಡೆದು ಚಾಂಪಿಯನ್ ಪಟ್ಟಕ್ಕೇರಿತ್ತು. ಎಸ್ಡಿಎಂ ಸ್ಫೋರ್ಟ್ ಉಜಿರೆ ತಂಡ 750 ಅಂಕಗಳನ್ನು ಪಡೆದು ರನ್ನರ್ಸ್ ಗೆ ಸಮಾಧಾನ ಪಟ್ಟಿತ್ತು.
ಯೂತ್ ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ಕಾಲೇಜು 211 ಅಂಕ, ಆಳ್ವಾಸ್ ಜೂನಿಯರ್ ಮಹಿಳಾ ತಂಡ 200 ಅಂಕ, ಅಳ್ವಾಸ್ ಸೀನಿಯರ್ ಮಹಿಳಾ ತಂಡ 220 ಅಂಕ, ಯೂತ್ ಬಾಲಕರ ಆಳ್ವಾಸ್ ತಂಡ 198 ಅಂಕ, ಆಳ್ವಾಸ್ ಪುರುಷರ ಜೂನಿಯರ್ 185 ಅಂಕ, ಆಳ್ವಾಸ್ ಸೀನಿಯರ್ ಪುರುಷರ ತಂಡ 206 ಅಂಕ ಗಳಿಸಿತ್ತು.
ಜೂನಿಯರ್ ಮಹಿಳಾ ವಿಭಾಗದಲ್ಲಿ ಎಸ್ಡಿಎಂ ಉಜಿರೆ ತಂಡ 199 ಅಂಕ, ಸೀನಿಯರ್ ಮಹಿಳಾ ವಿಭಾಗದಲ್ಲಿ ಎಸ್ಡಿಎಂ ತಂಡ 183 ಅಂಕ, ಜೂನಿಯರ್ ಪುರುಷರ ವಿಭಾಗದಲ್ಲಿ ಎಸ್ಡಿಎಂ ತಂಡ 170 ಅಂಕ, ಸೀನಿಯರ್ ಪುರುಷರ ವಿಭಾಗದ ಉಜಿರೆ ತಂಡ 198 ಅಂಕ ಪಡೆದುಕೊಂಡಿತ್ತು. ಯೂತ್ ಬಾಲಕಿಯರ ವಿಭಾಗದಲ್ಲಿ ಬೆಳಗಾವಿ ಡಿವೈಇಎಸ್ ತಂಡ 169 ಅಂಕ ಪಡೆದುಕೊಂಡಿತ್ತು. ಅಲ್ಲದೇ ಯೂತ್ ಬಾಲಕರ ವಿಭಾಗದಲ್ಲಿ ದಾವಣಗೆರೆ ಜಿಲ್ಲಾ ವೇಟ್ ಲಿಫ್ಟಿಂಗ್ ಎಸೋಸಿಯೇಷನ್ ತಂಡ 127 ಅಂಕ ಪಡೆದು ರನ್ನರ್ಸ್ ವಿಭಾಗದಲ್ಲಿ ಸ್ಥಾನ ಪಡೆಯಿತು.
ಉತ್ತಮ ಲಿಫ್ಟರ್ ಯೂತ್ ಬಾಲಕಿಯರ ವಿಭಾಗದಲ್ಲಿ ಮೂಡಬಿದಿರೆಯ ಮಾನಸ.ಎಸ್ ಪಡೆದುಕೊಂಡರು. ಜೂನಿಯರ್ ಮಹಿಳೆಯರಲ್ಲಿ ಬೆಂಗಳೂರು ಸಂಜೀವಿ ಶೆಟ್ಟಿ ಸ್ಫೋರ್ಟ್ ಕ್ಲಬ್ ನ ಮೋನಿಷಾ. ಪಿ, ಸೀನಿಯರ್ ಮಹಿಳೆಯರಲ್ಲಿ ಆಳ್ವಾಸ್ ಏಕಲವ್ಯದ ತನುಷಾ. ಎಂ ಪಡೆದುಕೊಂಡರು.
ಯೂತ್ ಬಾಲಕರಲ್ಲಿ ದಾವಣಗೆರೆ ಜಿಲ್ಲಾ ವೇಟ್ ಲಿಫ್ಟಿಂಗ್ ಎಸೋಸಿಯೇಷನ್ ನ ಗಣೇಶ್.ವಿ, ಜೂನಿಯರ್ ಪುರುಷರ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲಾ ತಂಡದ ಸಂಕೇತ್. ಎಸ್, ಸೀನಿಯರ್ ಪುರುಷರ ವಿಭಾಗದಲ್ಲಿ ಉಡುಪಿ ಜಿಲ್ಲಾ ವೇಟ್ ಲಿಫ್ಟಿಂಗ್ ಎಸೋಸಿಯೇಷನ್ನ ಮಂಜುನಾಥ್ ಮರಾಟಿ ಪಡೆದುಕೊಂಡರು.







