ಸುಳ್ಯಕ್ಕೆ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರ ಭೇಟಿ, ಅಧಿಕಾರಿಗಳೊಂದಿಗೆ ಸಮಾಲೋಚನೆ

ಸುಳ್ಯ | ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಸಿ.ರಮೇಶ್ ಅವರು ಸುಳ್ಯಕ್ಕೆ ಗುರುವಾರ ಭೇಟಿ ನೀಡಿ, ಸುಳ್ಯ ತಾಲೂಕು ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಬಳಿಕ ಸುಳ್ಯ ಮೆಸ್ಕಾಂ ಕಚೇರಿಗೆ ಭೇಟಿ ನೀಡಿದ ಅವರು, ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ನಾಯ್ಕ್ ಹಾಗೂ ಅಧಿಕಾರಿಗಳೂಂದಿಗೆ ಸಭೆ ನಡೆಸಿ, ವಿದ್ಯುತ್ ಗುತ್ತಿಗೆದಾರ ಸದಸ್ಯರಿಗೆ ಆಗುವ ಸಮಸ್ಯೆಗಳ ಕುರಿತು ಚರ್ಚಿಸಿದರು. ಈ ವೇಳೆ ಮೆಸ್ಕಾಂ ಅಧಿಕಾರಿಗಳು ವಿದ್ಯುತ್ ಗುತ್ತಿಗೆದಾರರ ಸಂಘದ ಸದಸ್ಯರ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಸರಿ ಮಾಡುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಕುಶಾಲ್ ಪೂಜಾರಿ, ಜಿಲ್ಲಾ ಕಾರ್ಯದರ್ಶಿ ಪುರುಷೋತ್ತಮ, ಸಂಘಟನಾ ಕಾರ್ಯದರ್ಶಿ ಯೂಸುಫ್, ರಾಜ್ಯ ಸಮಿತಿಯ ಸದಸ್ಯರಾದ ರವಿ ಸುವರ್ಣ, ಸುಳ್ಯ ಉಪಸಮಿತಿಯ ಅಧ್ಯಕ್ಷ ಸೋಮಶೇಕರ ಪೈಕ, ಸುಳ್ಯ ಸಮಿತಿಯ ಪದಾಧಿಕಾರಿಗಳು, ಹಾಗೂ ಮೆಸ್ಕಾಂ ಎಒಒ ಅನುರಾಧ, ಬೆಳ್ಳಾರೆ ಜೆಇ ಪ್ರಸಾದ್, ಜಾಲ್ಸೂರು ಜೆಇ ಮಹೇಶ್ ಕುಳ, ಅರಂತೋಡು ಜೆಇ ಅಭಿಷೇಕ್ ಉಪಸ್ಥಿತರಿದ್ದರು.





