ಕಲ್ಕಟ್ಟ: ವಿದ್ಯಾರ್ಥಿಗಳ ಮೀಲಾದ್ ಫೆಸ್ಟ್ ಸಮಾರೋಪ

ದೇರಳಕಟ್ಟೆ : ಇಲ್ಯಾಸ್ ಜುಮಾ ಮಸೀದಿ ಹಾಗೂ ರಿಫಾಯಿಯ್ಯ ಮದ್ರಸ ಕಲ್ಕಟ್ಟ ಇದರ ಆಶ್ರಯದಲ್ಲಿ ಮೀಲಾದುನ್ನಬಿ ಆಚರಣೆ ಪ್ರಯುಕ್ತ ಎರಡು ದಿನಗಳ ಕಾಲ ನಡೆದ ಮದ್ರಸ ವಿದ್ಯಾರ್ಥಿಗಳ ಮೀಲಾದ್ ಫೆಸ್ಟ್ ಕಾರ್ಯಕ್ರಮದ ಸಮಾರೋಪ ಸಮಾರಂಭ ಶನಿವಾರ ನಡೆಯಿತು.
ಇಲ್ಯಾಸ್ ಜುಮಾ ಮಸೀದಿ ಖತೀಬ್ ಇಸ್ಹಾಕ್ ಸಖಾಫಿ ನಂದಾವರ ದುಆ ನೆರವೇರಿಸಿ ಧಾರ್ಮಿಕ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಇಲ್ಯಾಸ್ ಜುಮಾ ಮಸೀದಿ ಅಧ್ಯಕ್ಷ ಮನ್ಸೂರ್ ಹಾಜಿ ನಾಟೆಕಲ್ ವಿಜೇತರಿಗೆ ಬಹುಮಾನ ವಿತರಿಸಿದರು.
ಹಾಜರಾತಿ, ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಸುಬಹಿ ನಮಾಝ್ ಗೆ ದಿನನಿತ್ಯ ಮಸೀದಿಗೆ ಬರುತ್ತಿದ್ದ ವಿದ್ಯಾರ್ಥಿಯನ್ನು ಗೌರವಿಸಲಾಯಿತು.
ಇಲ್ಯಾಸ್ ಜುಮಾ ಮಸೀದಿ ಖತೀಬ್ ಇಸ್ಹಾಕ್ ಸಖಾಫಿ ನಂದಾವರ,ರಿಫಾಯಿಯ್ಯ ಮದ್ರಸದ ಸದ್ ರ್ ಉಸ್ತಾದ್ ಶರೀಫ್ ಸ ಅದಿ,ಮುಅಲ್ಲಿಂಗಳಾದ ರಝಾಕ್ ಸ ಅದಿ, ಹಸನ್ ಸಅದಿ, ಸಿದ್ದೀಕ್ ಅಹ್ಸನಿ, ಇಸ್ಹಾಕ್ ಸಅದಿ, ಅವರನ್ನು ಈ ಸಂದರ್ಭದಲ್ಲಿ ಸಮಿತಿ ವತಿಯಿಂದ ಗೌರವಿಸಲಾಯಿತು.
ಈ ಕಾರ್ಯಕ್ರಮ ದಲ್ಲಿ ಮುಅಲ್ಲಿಂ ಇಸ್ಹಾಕ್ ಸಅದಿ , ರಝಾಕ್ ಸ ಅದಿ,ಹಸನ್ ಸಅದಿ, ಸಿದ್ದೀಕ್ ಅಹ್ಸನಿ, ಗೌರವ ಅಧ್ಯಕ್ಷ ಪೊಡಿಯಬ್ಬ ಹಾಜಿ, ಪ್ರಧಾನ ಕಾರ್ಯದರ್ಶಿ ಮೋನು ಕಲ್ಕಟ್ಟ, ಉಪಾಧ್ಯಕ್ಷ ಮುಹಮ್ಮದ್ ಕಂಡಿಕ, ಮದ್ರಸ ಉಸ್ತುವಾರಿ ಮೊಯ್ದಿನ್ ಮೋನು, ಕೋಶಾಧಿಕಾರಿ ನಾಸೀರ್, ಕಾರ್ಯದರ್ಶಿ ಹಸೈನಾರ್ ತಟ್ಲ, ರಝಾಕ್ ಕಲ್ಕಟ್ಟ, ಅಬ್ದುಲ್ ರಹ್ಮಾನ್ ರಝ್ವಿ, ಪತ್ರಕರ್ತ ಬಶೀರ್ ಕಲ್ಕಟ್ಟ ಮತ್ತಿತರರು ಉಪಸ್ಥಿತರಿದ್ದರು.
ಸದರ್ ಉಸ್ತಾದ್ ಶರೀಫ್ ಸ ಅದಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಕಾರ್ಯದರ್ಶಿ ಮೊಹಮ್ಮದ್ ಮಾಸ್ಟರ್ ಸ್ವಾಗತಿಸಿದರು. ಮದ್ರಸ ಉಸ್ತುವಾರಿ ಮೊಯ್ದಿನ್ ಮೋನು ವಂದಿಸಿದರು.







