ನ.12ರಂದು ತುಳು ಅಕಾಡಮಿಗೆ ವಿದ್ಯಾರ್ಥಿಗಳ ಭೇಟಿ
ಮಂಗಳೂರು, ನ.10:ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯು ವಿದ್ಯಾರ್ಥಿ, ಯುವಜನರಲ್ಲಿ ತುಳು ಸಾಹಿತ್ಯ ಓದಿನ ಅಭಿರುಚಿ ಮೂಡಿಸಲು ಹಮ್ಮಿಕೊಂಡಿರುವ ’ಅಕಾಡಮಿಡ್ ಒಂಜಿ ದಿನ ; ಬಲೆ ತುಳು ಓದುಗ’ ಅಭಿಯಾನದ ಹನ್ನೆರಡನೇ ಕಾರ್ಯಕ್ರಮ ನ.12 ರಂದು ನಡೆಯಲಿದೆ.
ನಗರದ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ 30 ವಿದ್ಯಾರ್ಥಿಗಳು ಉರ್ವಸ್ಟೋರ್ ನಲ್ಲಿರುವ ತುಳು ಭವನದ ಗ್ರಂಥಾಲಯಕ್ಕೆ ಭೇಟಿ ನೀಡಿ ಅಧ್ಯಯನ ಹಾಗೂ ಸಂವಾದ ನಡೆಸುವರು ಎಂದು ಪ್ರಕಟನೆ ತಿಳಿಸಿದೆ.
Next Story





