‘ಉಮೀದ್ ’ನಲ್ಲಿ ವಕ್ಫ್ ಸಂಸ್ಥೆಗಳ ಮಾಹಿತಿ ಸಲ್ಲಿಕೆ : ದ.ಕ. ಜಿಲ್ಲೆಯಲ್ಲಿ ಶೇ.74ರಷ್ಟು ಪ್ರಗತಿ

ಮಂಗಳೂರು, ನ.23: ದ.ಕ. ಜಿಲ್ಲೆಯಲ್ಲಿ ವಕ್ಫ್ ಸಂಸ್ಥೆಗಳ ವಿವರಗಳನ್ನು ಉಮಿದ್ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೇ.74ರಷ್ಟು ವಕ್ಫ್ ಸೊತ್ತುಗಳ ದಾಖಲೆಗಳನ್ನು ಅಪ್ಲೋಡ್ ಮಾಡಲಾಗಿದೆ ಎಂದು ದ.ಕ. ಜಿಲ್ಲಾ ವಕ್ಫ್ ಕಚೇರಿಯ ಮೂಲಗಳು ತಿಳಿಸಿವೆ.
ರಾಜ್ಯ ವಕ್ಫ್ ಸಚಿವರು 2025 ನವೆಂಬರ್ 27ರ ಮೊದಲು ವಕ್ಫ್‌ನ ಎಲ್ಲ ಸೊತ್ತುಗಳ ದಾಖಲೆಗಳನ್ನು ಅಪ್ಲೋಡ್ ಮಾಡುವಂತೆ ಈಗಾಗಲೇ ನಿರ್ದೇಶನ ನೀಡಿದ್ದಾರೆ.
ಅದರಂತೆ ಇನ್ನು ಬಾಕಿ ಉಳಿದಿರುವ ಮಸೀದಿ, ಮದ್ರಸ ಹಾಗೂ ಖಬರಸ್ಥಾನಗಳನ್ನು ವಿವರಗಳನ್ನು ತಕ್ಷಣ ಸಂಬಂಧಪಟ್ಟ ಸಂಸ್ಥೆಗಳ ಆಡಳಿತ ಸಮಿತಿಯ ಅಧ್ಯಕ್ಷರು ಅಥವಾ ಕಾರ್ಯದರ್ಶಿ ಜಿಲ್ಲಾ ವಕ್ಫ್ ಕಚೇರಿಯನ್ನು ಸಂಪರ್ಕಿಸಿ ಸೊತ್ತುಗಳ ವಿವರಗಳನ್ನು ಉಮೀದ್ ಪೋರ್ಟಲ್- 2025ರಲ್ಲಿ ಅಪ್ಲೋಡ್ ಮಾಡುವಂತೆ ದ . ಕ. ಜಿಲ್ಲಾ ವಕ್ಫ್ ಕಚೇರಿಯ ಪ್ರಕಟನೆ ತಿಳಿಸಿದೆ.
Next Story





