ಸುಬ್ರಹ್ಮಣ್ಯ: ಬಾಲಕಿಯನ್ನು ಗರ್ಭಿಣಿಯಾಗಿಸಿದ ಪ್ರಕರಣ; ಆರೋಪಿ ಉಮೇಶ್ ಬಂಧನ

ಸುಬ್ರಹ್ಮಣ್ಯ: ಬಾಲಕಿಯನ್ನು ಗರ್ಭಿಣಿಯಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಯುವಕನೋರ್ವನನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದಾರೆ.
ಬಾಳುಗೋಡು ಗ್ರಾಮದ ಉಮೇಶ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ಕೂರು ಗ್ರಾಮದ ಬಾಲಕಿ ಮನೆಯವರೊಂದಿಗೆ ಗುತ್ತಿಗಾರಿನಲ್ಲಿ ವಾಸವಿದ್ದು, ಬಾಳುಗೋಡು ಗ್ರಾಮದ ಉಮೇಶ್ ಈಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ ಪರಿಣಾಮ ಆಕೆ ಗರ್ಭಿಣಿಯಾಗಿದ್ದು, ಕೆಲ ಸಮಯದ ಹಿಂದೆ ಪ್ರಕರಣ ಬಯಲಿಗೆ ಬಂದಿದೆ.
ಪ್ರಕರಣ ಸಂಬಂಧ ಆರೋಪಿ ಬಾಳುಗೋಡಿನ ಉಮೇಶ್‌ನನ್ನು ಬಂಧಿಸಲಾಗಿದೆ. ಇತ್ತ ಬಾಲಕಿ ಮಗುವಿಗೆ ಜನ್ಮ ನೀಡಿರುವುದಾಗಿ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Next Story





