ಫಾದರ್ ಮುಲ್ಲರ್‌ನಲ್ಲಿ ಕಿಡ್ನಿ ಕ್ಯಾನ್ಸರ್‌ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

ಮಂಗಳೂರು : ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ವಿವಿಧ ವಿಭಾಗಗಳ ತಜ್ಞ ವೈದ್ಯರು ಜೊತೆಯಾಗಿ 58ರ ಹರೆಯದ ವ್ಯಕಿಯೊಬ್ಬರಿಗೆ ಕಿಡ್ನಿ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.
ಅಪರೂಪದ ಕಿಡ್ನಿ ಕ್ಯಾನ್ಸರ್‌ಗೆ ಶಸ್ತ್ರಚಿಕಿತ್ಸೆಯನ್ನು ಟೋಟಲ್ ಸರ್ಕ್ಯುಲೇಟರಿ ಅರೆಸ್ಟ್ (ಟಿಎಸ್‌ಎ) ತಂತ್ರದ ಮೂಲಕ, ಕಾರ್ಡಿಯೋಪಲ್ಮನರಿ ಬೈಪಾಸ್ (ಸಿಪಿಬಿ) ಸಹಾಯದಿಂದ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮಾಡಬೇಕಾಗಿದೆ. ಈ ಶಸ್ತ್ರ ಚಿಕಿತ್ಸೆಯನ್ನು ಒಟ್ಟು 165 ನಿಮಿಷಗಳಲ್ಲಿ ನಿರ್ವಹಿಸಲಾಗಿದೆ.
ಈ ಸವಾಲಿನ ಶಸ್ತ್ರಚಿಕಿತ್ಸೆ ಅನೇಕ ವಿಭಾಗಗಳ ತಜ್ಞರ ಸಂಘಟಿತ ಪ್ರಯತ್ನದಿಂದ ಯಶಸ್ವಿಯಾಗಿ ಪೂರ್ಣಗೊಂಡಿತು.
ಯೂರಾಲಜಿ ವಿಭಾಗದಿಂದ ಡಾ.ಪ್ರಶಾಂತ್ ಅಡಿಗ (ಪ್ರೊಫೆಸರ್ ಮತ್ತು ವಿಭಾಗಾಧ್ಯಕ್ಷ), ಡಾ.ನಂದಕಿಶೋರ್ ಬಿ, ಡಾ.ಕಿಷನ್ ರಾಜ್, ಡಾ.ಸಜಲ್ ಗುಪ್ತಾ, ಡಾ.ಭರತ್ ವಿ.ಎಸ್, ಹಾಗೂ ಡಾ.ಪಟೇಲ್ ನಿರ್ಮಯ್ ಜೆ. ಅವರು ತಂಡದಲ್ಲಿ ಇದ್ದರು. ಕಾರ್ಡಿಯೋಥೊರಾಸಿಕ್ ಮತ್ತು ವಾಸ್ಕ್ಯುಲರ್ ಸರ್ಜರಿ (ಸಿಟಿವಿಎಸ್) ವಿಭಾಗದ ಮುಖ್ಯಸ್ಥ ಡಾ.ಆನಂದ್ ಕೆ.ಟಿ. ಸರ್ಜಿಕಲ್ ಗ್ಯಾಸ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥ ಡಾ.ಗಣೇಶ್ ಎಂ.ಕೆ. ಹಾಗೂ ಅನಸ್ತೀಷಿಯಾ ವಿಭಾಗದ ಡಾ.ಚೇತನಾ ಆನಂದ್ ಪಾಲ್ಗೊಂಡಿದ್ದರು.
ರೋಗಿಯು ಶಸ್ತ್ರಚಿಕಿತ್ಸೆಯ ನಂತರ ಬೇಗನೆ ಚೇತರಿಸಿಕೊಂಡು, ಐದು ದಿನಗಳ ನಂತರ ಅಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಬಳಿಕ ಅಕ್ಟೋಬರ್ ಮೊದಲ ವಾರದಲ್ಲಿ ಹೊರರೋಗಿಗಳ ವಿಭಾಗಕ್ಕೆ (ಒಪಿಡಿ) ಭೇಟಿ ನೀಡಿದ್ದು, ಅವರ ಆರೋಗ್ಯ ಸ್ಥಿತಿ ತೃಪ್ತಿದಾಯಕವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.







