ಸುಳ್ಯ | ರಸ್ತೆ ಬದಿಯ ಮೋರಿಗೆ ಗುದ್ದಿದ ಕಾರು: ನಾಲ್ವರಿಗೆ ಗಾಯ

ಸಾಂದರ್ಭಿಕ ಚಿತ್ರ
ಸುಳ್ಯ, ನ.21: ಕಾರೊಂದು ರಸ್ತೆ ಬದಿಯ ಮೋರಿಗೆ ಗುದ್ದಿದ ಪರಿಣಾಮ ಮೂವರು ಗಾಯಗೊಂಡ ಘಟನೆ ಶುಕ್ರವಾರ ಕನಕಮಜಲು ಸಮೀಪ ಕನ್ನಡ್ಕ ಎಂಬಲ್ಲಿ ನಡೆದಿದೆ.
ಕಾರು ಚಾಲಕ ಮಂಡೆಕೋಲಿನ ಖಲೀಲ್ ಸಹಿತ ಮೂವರು ಗಾಯಗೊಂಡಿದ್ದಾರೆ.
ಪುತ್ತೂರು ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಗೆ ಗುದ್ದಿದೆ.
ಗಾಯಾಳುಗಳನ್ನು ಕೂಡಲೇ ಆಟೊ ರಿಕ್ಷಾದಲ್ಲಿ ಸುಳ್ಯದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತು.
Next Story





