ಸುಳ್ಯ: ಕುಕ್ಕರ್ ಸಿಡಿದು ಮನೆಗೆ ಹಾನಿ

ಸುಳ್ಯ: ಗ್ಯಾಸ್ ಒಲೆಯಲ್ಲಿ ಇಟ್ಟಿದ್ದ ಕುಕ್ಕರ್ ಸಿಡಿದು ಅಡುಗೆ ಮನೆಗೆ ಹಾನಿಯಾದ ಘಟನೆ ಸುಳ್ಯದ ಬೋರುಗುಡ್ಡೆ ಎಂಬಲ್ಲಿ ಬುಧವಾರ ನಡೆದಿದೆ.
ಬೋರುಗುಡ್ಡೆ ನಿವಾಸಿ ಅಬ್ಬುಲ್ಲಾ ಎಂಬವರ ಮನೆಯಲ್ಲಿ ಬುಧವಾರ ಮುಂಜಾನೆ ಬೆಳಗಿನ ಉಪಹಾರ ತಯಾರಿಸುವ ವೇಳೆ ಗ್ಯಾಸ್ ಒಲೆಯ ಮೇಲೆ ಇಟ್ಟಿದ್ದ ಕುಕ್ಕರ್ ಹಠಾತ್ ಸಿಡಿದಿದೆ. ಪರಿಣಾಮ ಅಡುಗೆ ಮನೆಯ ಗೋಡೆ, ಟೈಲ್ಸ್, ಮೇಲ್ಟಾವಣಿ ಹಾಗೂ ಅಡುಗೆ ಸಾಮಾನುಗಳು ಹಾನಿಗೊಂಡಿವೆ. ಘಟನೆ ಸಂಭವಿಸಿದ ವೇಳೆ ಮನೆಮಂದಿ ಅಡುಗೆಮನೆ ಸಮೀಪದಲ್ಲೇ ಇದ್ದರೂ, ಅದೃಷ್ಟವಶಾತ್ ಯಾವುದೇ ರೀತಿಯ ಗಾಯ ಅಥವಾ ಅಪಾಯ ಸಂಭವಿಸದೇ ಪಾರಾಗಿದ್ದಾರೆ.
Next Story





