ಸುಳ್ಯ: ಹಿರಿಯ ನ್ಯಾಯವಾದಿ ಕುಂಞಿಪಳ್ಳಿ ನಿಧನ

ಸುಳ್ಯ: ತಾಲೂಕಿನ ಪ್ರಥಮ ನೋಟರಿ, ತಾಲೂಕು ಬೋರ್ಡ್ ಮಾಜಿ ಅಧ್ಯಕ್ಷ, ಜಿಲ್ಲಾ ಪರಿಷತ್ ಮಾಜಿ ಸದಸ್ಯ, ನ್ಯಾಯವಾದಿ ಐ.ಕುಂಞಿಪಳ್ಳಿ ಐವತ್ತೊಕ್ಲು(90) ವಯೋಸಹಜ ಅನಾರೋಗ್ಯದಿಂದ ಶುಕ್ರವಾರ ಬೆಳಗ್ಗೆ ಪೈಚಾರಿನಲ್ಲಿರುವ ತನ್ನ ಸ್ವಗೃಹದಲ್ಲಿ ನಿಧರಾಗಿದ್ದಾರೆ.
ಐವತ್ತೊಕ್ಲು ಮನೆತನದವರಾದ ಕುಂಞಿಪಳ್ಳಿಯವರು ಎಣ್ಮೂರು- ಐವತ್ತೊಕ್ಲು ರಹ್ಮಾನಿಯಾ ಕೇಂದ್ರ ಜುಮಾ ಮಸೀದಿಯ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ಮೃತರ ಅಂತ್ಯಸಂಸ್ಕಾರವು ಎಣ್ಮೂರು- ಐವತ್ತೊಕ್ಲು ರಹ್ಮಾನಿಯಾ ಕೇಂದ್ರ ಜುಮಾ ಮಸೀದಿಯ ಕಬರ್ ಸ್ಥಾನದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Next Story





