ಸುಳ್ಯ | ರಾಜ್ಯ ಮಟ್ಟದ ವೇಟ್ ಲಿಫ್ಟಿಂಗ್ ಚಾಂಪಿಯನ್ಶಿಪ್ ಸಮಾರೋಪ

ಸುಳ್ಯ : ಕರ್ನಾಟಕ ರಾಜ್ಯ ವೇಟ್ ಲಿಫ್ಟಿಂಗ್ ಸಂಸ್ಥೆ ಬೆಂಗಳೂರು, ಸುಳ್ಯದ ಸ್ಪೋಟ್ರ್ಸ್ ಮತ್ತು ಆಟ್ರ್ಸ್ ಎಸೋಸಿಯೇಶನ್ ಹಾಗೂ ಕರ್ನಾಟಕ ರಾಜ್ಯ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಸಂಘಟನಾ ವತಿಯಿಂದ ಸುಳ್ಯದಲ್ಲಿ ನಡೆದ ಕರ್ನಾಟಕ ರಾಜ್ಯ ಮಟ್ಟದ ವೇಟ್ ಲಿಫ್ಟಿಂಗ್ ಚಾಂಪಿಯನ್ಶಿಪ್ ಸಮಾಪನಗೊಂಡಿತು.
ಸುಳ್ಯದ ಯುವಜನ ಸಂಯುಕ್ತ ಮಂಡಳಿ ಬಳಿಯ ಸುಳ್ಯದ ಜೂನಿಯಲ್ ಕಾಲೇಜು ಮೈದಾನದಲ್ಲಿ ಮೂರು ದಿನ ನಡೆಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೆ.ವಿ.ಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಿ.ವಿ ಲೀಲಾಧರ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ರೋಟರಿ ಅಧ್ಯಕ್ಷ ಡಾ.ರಾಮ್ ಮೋಹನ್, ಭಾರತೀಯ ವೇಟ್ ಲಿಪ್ಟಿಂಗ್ ಫೇಡರೇಶನ್‌ನ ಗೌರವ ಕಾರ್ಯದರ್ಶಿ ಆನಂದೇ ಗೌಡ, ರವಿ ಕಕ್ಕೆಪದವು, ವೇಟ್ ಲಿಪ್ಟಿಂಗ್ ಸಂಘಟನಾ ಸಮಿತಿ ಕೋಶಾಧಿಕಾರಿ ಆಶೋಕ ಪ್ರಭು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಪ್ರಕಾಶ ಮೂಡಿತ್ತಾಯ, ಸ್ಪೋಟ್ಸ್ ಆಟ್ಸ್ ಕ್ಲಬ್ ನ ಜಾನ್ ವಿಲಿಯಂ ಲಸ್ರಾದೋ, ಕಾರ್ಯದರ್ಶಿ ಎ.ರಮೇಶ್, ಕೆ.ಗೋಕುಲದಾಸ್, ಲತಾ ಮಧಸೂದನ, ಧೀರಾ ಕ್ರಾಸ್ತ, ರಾಮಚಂದ್ರ ಪಲ್ಲತ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಾರಾಯಣ ಕೇಕಡ್ಕ ಸ್ವಾಗತಿಸಿದರು. ಸುನೀಲ್ ಕೇರ್ಪಳ ವಂದಿಸಿದರು. ವಿಜೇತರಿಗೆ ಸಮಾರಂಭದಲ್ಲಿ ಟ್ರೋಫಿಗಳನ್ನು ವಿತರಿಸಲಾಯಿತು.







