ಸುಳ್ಯ | ಮಹಡಿ ಮೇಲಿಂದ ಬಿದ್ದು ಗಾಯಗೊಂಡಿದ್ದ ಮಹಿಳೆ ಮೃತ್ಯು

ಸಾಂದರ್ಭಿಕ ಚಿತ್ರ
ಸುಳ್ಯ : ಮಹಡಿ ಮೇಲಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತಪಟ್ಟ ಘಟನೆ ಸಂಪಾಜೆಯ ಚೌಕಿ ಬಳಿ ಗುರುವಾರ ಸಂಭವಿಸಿದೆ.
ಮೂಲತಃ ಚೆಂಬು ಗ್ರಾಮದ ಉಂಬಳೆ ನಿವಾಸಿ ಆಗಿರುವ ಪ್ರಸ್ತುತ ಸಂಪಾಜೆಯ ಚೌಕಿ ಬಳಿಯ ಕಮಲ (85) ತನ್ನ ಮನೆಯ ಮಹಡಿಯಿಂದ ಇಳಿದುಕೊಂಡು ಬರುತ್ತಿರುವಾಗ ಕಾಲು ಜಾರಿ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಂಬುಲೆನ್ಸ್ ಮೂಲಕ ಸುಳ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅವರಿಗೆ ಓರ್ವ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಈ ಕುರಿತು ಕಲ್ಲುಗುಂಡಿ ಹೊರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





