ಸುಳ್ಯ | ಗುಂಡೇಟು ತಗಲಿದ ಕಡವೆಯ ಕಳೇಬರ ಪತ್ತೆ

ಸುಳ್ಯ, ನ.29: ಗುಂಡೇಟು ತಗಲಿ ಮೃತಪಟ್ಟ ಸ್ಥಿತಿಯಲ್ಲಿ ಕಡವೆಯೊಂದರ ಕಳೇಬರ ಪೆರಾಜೆ - ನಿಡ್ಯಮಲೆ ರಸ್ತೆಯ ಪಾನತ್ತಿಲ ಸಮೀಪ ಶನಿವಾರ ಪತ್ತೆಯಾಗಿದೆ.
ರಾತ್ರಿ ವೇಳೆ ಯಾರೋ ಕಡವೆಗೆ ಗುಂಡು ಹಾರಿಸಿದ್ದು, ಇದು ಬಂದು ರಸ್ತೆ ಬದಿ ಮೃತಪಟ್ಟಿದೆ.
ಬೆಳಗ್ಗಿನ ಜಾವ ಸ್ಥಳೀಯರಿಗೆ ಕಂಡು ಬಂದಿದ್ದು, ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಂಪಾಜೆ ಅರಣ್ಯಾಧಿಕಾರಿಗಳು ಕಡವೆಯ ಕಳೇಬರದ ಪರಿಶೀಲನೆ ನಡೆಸಿದ್ದು, ಪಶು ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ಮಾಡಿದರು.
ಈ ಬಗ್ಗೆ ಹಲವರನ್ನು ತನಿಖೆಗೆ ಒಳಪಡಿಸಿ ರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Next Story





