ಸೂರಲ್ಪಾಡಿ | ಅಲ್ ಖೈರ್ ಇಸ್ಲಾಮಿಕ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಮಂಗಳೂರು-ಸೂರಲ್ಪಾಡಿ, ನ.14: ಅಲ್ ಖೈರ್ ಇಸ್ಲಾಮಿಕ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಶುಕ್ರವಾರ ಮಕ್ಕಳ ದಿನಾಚರಣೆ ನಡೆಯಿತು.
ಈ ವೇಳೆ ಶಾಲೆಯ ಮುಖ್ಯ ಶಿಕ್ಷಕಿ ಕಲಂದರ್ ಬೀವಿ ಮಾತನಾಡಿ, ಪ್ರತಿ ಮಗು ಅನಂತ ಸಾಮರ್ಥ್ಯದ ದೀಪ. ಶಿಕ್ಷಣ, ಮೌಲ್ಯಗಳು ಮತ್ತು ಪ್ರೀತಿ ಈ ಮೂರು ಸೇರಿ ಮಗುವಿನ ಭವಿಷ್ಯವನ್ನು ಬೆಳಗಿಸುತ್ತವೆ ಎಂದರು.
ಶಿಕ್ಷಕರಿಂದ ವಿದ್ಯಾರ್ಥಿಗಳಿಗಾಗಿ ಹಾಡುಗಳು, ಮನರಂಜನಾ ಚಟುವಟಿಕೆಗಳು ಮತ್ತು ಮೌಲ್ಯಪೂರ್ಣ ಪ್ರದರ್ಶನಗಳು ನಡೆದವು.
ಮಕ್ಕಳ ದಿನಾಚರಣೆಯ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಅಡಳಿತ ಮಂಡಳಿಯ ವತಿಯಿಂದ ಬಹುಮಾನಗಳನ್ನು ವಿತರಿಸಲಾಯಿತು.
ಇಲ್ಯಾಸ್ ದಾರಿಮಿ ದುಆಗೈದರು. ಶಿಕ್ಷಕಿ ಅಲ್ಮಾಸ್ ಸ್ವಾಗತಿಸಿದರು. ಫರ್ಝಾನಾ ಕಾರ್ಯಕ್ರಮ ನಿರೂಪಿಸಿದರು. ಅಸ್ಫಾನಾ ವಂದಿಸಿದರು.
Next Story





