ಸುರತ್ಕಲ್ | ಚೊಕ್ಕಬೆಟ್ಟು ಜಾಮಿಯ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ

ಸುರತ್ಕಲ್, ಡಿ.26: ಸುರತ್ಕಲ್ ಚೊಕ್ಕಬೆಟ್ಟು ಜಾಮಿಯ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಡಿ.23ರಂದು ಚೊಕ್ಕಬೆಟ್ಟುವಿನ ಎಂಜೆಎಂ ಹಾಲ್ ನಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಜಾಮಿಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂಶುದ್ದೀನ್ ಐ.ಎಚ್. ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಾಜಿ ಶಾಸಕ ಮೊಯಿದೀನ್ ಬಾವ ಮಾತನಾಡಿದರು. ಹಂಝತ್ ಅಡ್ವೋಕೇಟ್, ಟಿ.ಮೊಹಮ್ಮದ್, ಆಸೀಫ್, ಮೊಹಮ್ಮದ್ ಶರೀಫ್, ಇಬ್ರಾಹಿಂ ಗುಲಾಮ್, ಶಂಶಾದ್ ಅಬೂಬಕರ್, ಜಾಮಿಯ ಶಾಲಾ ಆಡಳಿತ ಮಂಡಳಿಯ ಸರ್ವ ಸದಸ್ಯರು, ತಣ್ಣೀರುಬಾವಿ ಮೋಹಿಯುದ್ದಿನ್ ಜುಮಾ ಮಸೀದಿಯ ಎಲ್ಲಾ ಪದಾಧಿಕಾರಿಗಳು ಮತ್ತು ಮುಖ್ಯ ಶಿಕ್ಷಕಿ ಪ್ರಮೇಶ್ವರಿ ಮುಂತಾದವರು ಉಪಸ್ಥಿತರಿದ್ದರು.
ಜಾಮಿಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಅಬೂಬಕರ್ ಸ್ವಾಗತಿಸಿದರು. ಕಾರ್ಯದರ್ಶಿ ಬಜ್ಪೆ ಮೊದೀನಬ್ಬ ಶಾಲಾ ಸಾಧನೆಗಳ ಕುರಿತು ವರದಿ ವಾಚಿಸಿದರು. ಈ ಸಂದರ್ಭದಲ್ಲಿ ಮೊಯಿದೀನ್ ಬಾವ ಅವರನ್ನು ಸನ್ಮಾನಿಸಲಾಯಿತು. ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಬಳಿಕ ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ವೈವಿದ್ಯಮಯ ಮನೋರಂಜನಾ ಕಾರ್ಯಕ್ರಮ ಜರಗಿತು. ಶಿಕ್ಷಕಿಯರಾದ ದಯಾವತಿ ಮತ್ತು ಮಾಶಿತ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಖುಬ್ರ ವಂದಿಸಿದರು.





