ಸುರತ್ಕಲ್: ರಾಷ್ಟ್ರೀಯ ಮಾಜಿ ಕುಸ್ತಿಪಟು ಅಬ್ದುಲ್ ರಹೀಮ್ ಜುನೈದ್ ನಿಧನ

ಸುರತ್ಕಲ್: ಇಲ್ಲಿನ ಸುರತ್ಕಲ್ ನಿವಾಸಿ, ರಾಷ್ಟ್ರೀಯ ಮಾಜಿ ಕುಸ್ತಿಪಟು ಅಬ್ದುಲ್ ರಹೀಮ್ ಜುನೈದ್ (50) ಅವರು ಹೃದಯಾಘಾತಕ್ಕೀಡಾಗಿ ಇಂದು ಮಧ್ಯಾಹ್ನ ನಿಧನರಾದರು.
ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದ ಅವರು, ಸುರತ್ಕಲ್ ಇಡ್ಯಾ ಖಿಲ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ಕಬ್ಬಡಿ ತರಬೇತುದಾರರಾಗಿದ್ದರು.
ಬದ್ರಿಯಾ ಹೆಲ್ತ್ ಲೀಗ್, ಬ್ರದರ್ಸ್ ಇಡ್ಯಾ ಸ್ಪೋರ್ಟ್ಸ್ ಕ್ಲಬ್ ಸಕ್ರೀಯ ಸದಸ್ಯರಾಗಿದ್ದರು. ಅವಿವಾಹಿತರಾಗಿದ್ದ ಇವರು ಮೂವರು ಸಹೋದರಿಯರು, ಇಬ್ಬರು ಸಹೋದರರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಇಡ್ಯಾ ಖಿಲ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ, ಬದ್ರಿಯಾ ಹೆಲ್ತ್ ಲೀಗ್, ಬ್ರದರ್ಸ್ ಇಡ್ಯಾ ಸ್ಪೋರ್ಟ್ಸ್ ಕ್ಲಬ್ ಸಂಸ್ಥೆಗಳು ಸಂತಾಪ ವ್ಯಕ್ತಪಡಿಸಿವೆ.
Next Story





