ಸುರತ್ಕಲ್ ನಲ್ಲಿ 296.6 ಮಿ.ಮೀ. ಮಳೆ ದಾಖಲು

ಮಂಗಳೂರು, ಜು. 17: ದ.ಕ. ಜಿಲ್ಲೆಯಾದ್ಯಂತ ವ್ಯಾಪಕ ಮಳೆಯ ಜೆತೆಗೆ ಹಾನಿಯೂ ಮುಂದುವರಿದಿರುವಂತೆ ಸುರತ್ಕಲ್ ನಲ್ಲಿ ಬುಧವಾರ ಬೆಳಗ್ಗೆ 8:30ರಿಂದ ಗುರುವಾರ ಬೆಳಗ್ಗೆ 6 ಗಂಟೆಯವರೆಗೆ 296.6 ಮಿ.ಮೀ. ಮಳೆ ದಾಖಲಾಗಿದೆ. ಇದು ರಾಜ್ಯದಲ್ಲಿಯೇ ಅತ್ಯಧಿಕ ಮಳೆ ದಾಖಲಾದ ಪ್ರದೇಶವಾಗಿದೆ.
ಕರ್ನಾಟಕ ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರದ ಮಾಹಿತಿಯ ಪ್ರಕಾರ ಈ ಅವಧಿಯಲ್ಲಿ ಉಡುಪಿಯ ಕಾಪು ತೆಂಕದಲ್ಲಿ 277.5 ಮಿ.ಮೀ., ಕಾಪು ಹೆಜಮಾಡಿಯಲ್ಲಿ 271 ಮಿ.ಮೀ., ಮಂಗಳೂರಿನ ಬಾಳದಲ್ಲಿ 271 ಮಿ.ಮೀ., ಉಳ್ಳಾಲದಲ್ಲಿ 260 ಮಿ.ಮೀ., ಕೋಟೆಕಾರ್ ನಲ್ಲಿ 218.5 ಮಿ.ಮೀ., ಉಳ್ಳಾಲ ಕಿನ್ಯದಲ್ಲಿ 208.5 ಮಿ.ಮೀ.ನಂತೆ ಗರಿಷ್ಠ ಮಳೆ ದಾಖಲಾಗಿದೆ.
ರಾತ್ರಿ ತೀವ್ರ ಮಳೆಯ ವಾತಾವರಣದ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾದ್ಯಂತ ಗುರುವಾರ(ಜು.17) ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಇಂದು ಬೆಳಗ್ಗಿನಿಂದ ಮಳೆಯ ಪ್ರಮಾಣ ತಗ್ಗಿದೆ.
Next Story





