ಸ್ವರ್ಣಕುಂಭ ಸಹಕಾರಿ ಸಂಘದ ಚುನಾವಣೆ: ಅಧ್ಯಕ್ಷರಾಗಿ ನಾಗೇಶ್ ಕುಲಾಲ್ ಆಯ್ಕೆ

ಸುರತ್ಕಲ್ : ಸ್ವರ್ಣಕುಂಭ ವಿವಿದೊದ್ದೇಶ ಸಹಕಾರಿ ಸಂಘ (ನಿ) ಸುರತ್ಕಲ್ ಇದರ ಐದು ವರ್ಷದ ಅವಧಿಯ ಆಡಳಿತ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಹಾಗೂ ನಿರ್ದೇಶಕರಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮವು ಸಂಘದ ಪ್ರಧಾನ ಕಚೇರಿಯಲ್ಲಿ ಜ.24ರ ಶನಿವಾರ ನಡೆಯಿತು.
ನೂತನ ಅಧ್ಯಕ್ಷರಾಗಿ ನಾಗೇಶ್ ಕುಲಾಲ್ ಹಾಗೂ ಉಪಾಧ್ಯಕ್ಷರಾಗಿ ಮಾಧವ ಬಂಗೇರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಜ.9ರಂದು ನಿರ್ದೇಶಕರಿಗೆ ನಡೆದ ಚುನಾವಣೆಯಲ್ಲಿ ಮುದ್ದು ಮೂಲ್ಯ, ಭೋಜ ಬಂಗೇರ, ಮೋಹನ್ ಐ, ಗಂಗಾಧರ ಬಂಜನ್, ವಾಸು ಬಂಜನ್, ಮತಿ ಲೀಲಾ ಬಂಜನ್, ಉಷಾ ಆರ್. ಬಂಗೇರ, ಮಮತಾ ಗಣೇಶ್ ಮೊದಲಾದವರು ಆಯ್ಕೆಯಾಗಿದರು.
ಆಯ್ಕೆಯಾದ ಎಲ್ಲಾ ನಿರ್ದೇಶಕರಿಗೆ ಚುನಾವಣಾಧಿಕಾರಿ ನಾಗೇಂದ್ರ ಅವರು ಪ್ರಮಾಣ ಪತ್ರ ನೀಡಿ ಶುಭ ಹಾರೈಸಿದರು. ಈ ವೇಳೆ ಸಹಕಾರಿ ಸಂಘದ ಮುಖ್ಯ ಕಾರ್ಯನಿನಿರ್ವಹಣಾಧಿಕಾರಿ ಸಂಜೀವ ಮೂಲ್ಯ ಉಪಸ್ಥಿತರಿದ್ದರು.
Next Story





