ಎಸ್.ವೈ.ಎಸ್. ದ.ಕ. ಜಿಲ್ಲಾ ವೆಸ್ಟ್: 'ರಬೀವುಲ್ ಹಬೀಬ್' ಮೀಲಾದ್ ಅಭಿಯಾನಕ್ಕೆ ಚಾಲನೆ

ಮಂಗಳೂರು, ಸೆ.20: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ(ಎಸ್.ವೈ.ಎಸ್.)ದ ರಾಜ್ಯ ಸಮಿತಿಯ ನಿರ್ದೇಶನದಂತೆ ರಾಜ್ಯಾದ್ಯಂತ ಸೆ.16ರಿಂದ ಅಕ್ಟೋಬರ್ 15ರ ತನಕ ಹಮ್ಮಿಕೊಂಡಿರುವ 'ರಬೀವುಲ್ ಹಬೀಬ್' ಮೀಲಾದ್ ಅಭಿಯಾನದ ದ.ಕ. ವೆಸ್ಟ್ ಜಿಲ್ಲಾ ಮಟ್ಟದ ಉದ್ಘಾಟನೆ ಬೇಕಲ್ ಉಸ್ತಾದ್ ರ ಮಖ್ಬರ ಪರಿಸರದಲ್ಲಿ ನಡೆಯಿತು.
ಎಸ್.ವೈ.ಎಸ್. ಜಿಲ್ಲಾಧ್ಯಕ್ಷ ಇಸ್ಹಾಕ್ ಝುಹ್ರಿ ದೇರಳಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಹಾಫಿಳ್ ಯಾಕೂಬ್ ಸಅದಿ ನಾವೂರು ಅಭಿಯಾನದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಖಲೀಲ್ ಮಾಲಿಕಿ ಬೋಳಂತೂರು, ರಾಜ್ಯ ನಾಯಕರಾದ ಬಶೀರ್ ಮದನಿ ಕೂಳೂರು, ಆಸಿಫ್ ಹಾಜಿ ಕೃಷ್ಣಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿ ಅಬ್ದುರಹ್ಮಾನ್ ಪ್ರಿಂಟೆಕ್ ಕೃಷ್ಣಾಪುರ, ಕೋಶಾಧಿಕಾರಿ ನಝೀರ್ ಮುಡಿಪು, ಮರಿಕ್ಕಳ ಮುದರ್ರಿಸ್ ಅಬ್ಬಾಸ್ ಸಖಾಫಿ ಕೊಡಗು, ಜಿಲ್ಲಾ ಕಾರ್ಯದರ್ಶಿಗಳಾದ ಬದ್ರುದ್ದೀನ್ ಅಝ್ಹರಿ ಕೈಕಂಬ, ಮಹ್ಬೂಬುರ್ರಹ್ಮಾನ್ ಸಖಾಫಿ ಕಿನ್ಯ, ಉಮರುಲ್ ಫಾರೂಕ್ ಶೇಡಿಗುರಿ, ಅಬ್ದುರ್ರಝಾಕ್ ಭಾರತ್ ಮಂಚಿ, ಸದಸ್ಯರಾದ ಇಸ್ಮಾಯೀಲ್ ಮಾಸ್ಟರ್ ಮರಿಕ್ಕಳ, ತೌಸೀಫ್ ಸಅದಿ ಹರೇಕಳ ಮೊದಲಾದವರು ಉಪಸ್ಥಿತರಿದ್ದರು.