ಟೇಕ್ವಾಂಡೋ ಚಾಂಪಿಯನ್ ಶಿಪ್ : ದ.ಕ. ಜಿಲ್ಲೆಯ ಪಟುಗಳಿಂದ ಅಪೂರ್ವ ಪ್ರದರ್ಶನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಟ್ವೆಕಾಂಡೋ ಪಟುಗಳು ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ 42ನೇ ರಾಜ್ಯ ಟೇಕ್ವಾಂಡೋ ಚಾಂಪಿಯನ್ ಶಿಪ್‌ನಲ್ಲಿ ಅಪೂರ್ವ ಪ್ರದರ್ಶನ ನೀಡಿ ಕ್ರೀಡಾ ವಿಭಾಗದಲ್ಲಿ ಜಿಲ್ಲೆಗೆ ಕೀರ್ತಿ ತಂದು ಗಮನ ಸೆಳೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ತರಬೇತುದಾರ ಇಸ್ಹಾಕ್ ಇಸ್ಮಾಯಿಲ್ ಹಾಗೂ ಸಹಾಯಕ ತರಬೇತುದಾರ ಮೆಹುಲ್ ಬಂಗೇರ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಟ್ವೆಕಾಂಡೋ ಪಟುಗಳು ಅತ್ಯುತ್ತಮ ಕೌಶಲ್ಯ ಮತ್ತು ದೃಢ ಸಂಕಲ್ಪದ ಪ್ರದರ್ಶನ ನೀಡಿದೆ. ವಿವಿಧ ವಯೋಮಾನ ಮತ್ತು ತೂಕ ವಿಭಾಗಗಳಲ್ಲಿ ಹಲವು ಪದಕಗಳನ್ನು ಕ್ರೀಡಾಪಟು ಪ್ರತಿಭೆಗಳು ತಮ್ಮದಾಗಿಸಿಕೊಂಡು ರಾಜ್ಯ ಮಟ್ಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಇತಿಹಾಸ ನಿರ್ಮಿಸುವಂತೆ ಮಾಡಿದ್ದಾರೆ.
ಸ್ವಪ್ನ (ಕೆಡೆಟ್ ಮಹಿಳಾ, 33 ಕೆಜಿ ವಿಭಾಗದಲ್ಲಿ ಚಿನ್ನದ ಪದಕ), ಮುಹಮ್ಮದ್ ನಿಹಾಲ್ (ಜೂನಿಯರ್ ಪುರುಷ, 63 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ), ಶಯಾನ್ (ಸಬ್-ಜೂನಿಯರ್ ಪುರುಷ, 12 ವರ್ಷದೊಳಗಿನ ವಿಭಾಗದಲ್ಲಿ ಚಿನ್ನದ ಪದಕ), ವಿವಾನ್ ಕೆ (ಸಬ್-ಜೂನಿಯರ್ ಪುರುಷ, 8 ವರ್ಷದೊಳಗಿನ ವಿಭಾಗದಲ್ಲಿ ಚಿನ್ನದ ಪದಕ), ವಿಹಾನ್ ಶೆಟ್ಟಿ (ಸಬ್-ಜೂನಿಯರ್ ಪುರುಷ, 8 ವರ್ಷದೊಳಗಿನ ವಿಭಾಗದಲ್ಲಿ ಕಂಚಿನ ಪದಕ), ಅನಿರುದ್ಧ್ ಕೆ (ಸಬ್-ಜೂನಿಯರ್ ಪುರುಷ, 10 ವರ್ಷದೊಳಗಿನ ವಿಭಾಗದಲ್ಲಿ ಚಿನ್ನದ ಪದಕ), ಸುಮಿತ್ ಬುಡಿಯಾಲ್ (ಸಬ್-ಜೂನಿಯರ್ ಪುರುಷ, 12 ವರ್ಷದೊಳಗಿನ ವಿಭಾಗದಲ್ಲಿ ಚಿನ್ನದ ಪದಕ), ಕ್ರಿಸ್ಟನ್ ಪಿ (ಸಬ್-ಜೂನಿಯರ್, 18 ವರ್ಷಕ್ಕಿಂತ ಮೇಲ್ಪಟ್ಟ ವಿಭಾಗದಲ್ಲಿ ಕಂಚಿನ ಪದಕ), ರಿಫಾ (ಸಬ್-ಜೂನಿಯರ್ ಮಹಿಳೆ, 12 ವರ್ಷದೊಳಗಿನ ವಿಭಾಗದಲ್ಲಿ ಚಿನ್ನದ ಪದಕ) ಗೆದ್ದುಕೊಂಡು ಗಮನಾರ್ಹ ಸಾಧನೆಗೈದಿದ್ದಾರೆ.







