ಪಿಯು ಕಲಾ ವಿಭಾಗದಲ್ಲಿ ರಾಜ್ಯಕ್ಕೆ 8ನೇ ಸ್ಥಾನ ಪಡೆದ ತಫ್ ಹೀಮಾ ಫಾತಿಮಾ

ಮಂಗಳೂರು: ಪ್ರಸಕ್ತ (2024-25) ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ತಫ್ ಹೀಮಾ ಫಾತಿಮಾ ಕಲಾ ವಿಭಾಗದಲ್ಲಿ 590 (98.33 ಶೇ.) ಅಂಕಗಳನ್ನು ಗಳಿಸಿ ರಾಜ್ಯದಲ್ಲಿ ಜಂಟಿ 8ನೇ ಸ್ಥಾನ ಪಡೆದಿದ್ದಾರೆ.
ಅಲೋಶಿಯಸ್ ಪದವಿ ಪೂರ್ವ ಕಾಲೇಜಿಗೆ ಜಂಟಿ ಪ್ರಥಮ ಸ್ಥಾನಿಯಾಗಿರುವ ಈಕೆ ಕಲಾ ವಿಭಾಗದಲ್ಲಿ ದ.ಕ. ಜಿಲ್ಲೆಗೆ ದ್ವಿತೀಯ ಸ್ಥಾನಿಯಾಗಿದ್ದಾರೆ.
ಅಬ್ದುಲ್ ರಶೀದ್ ಬಣಕಲ್ ಹಾಗೂ ತಂಝೀಲಾ ದಂಪತಿಯ ಪುತ್ರಿಯಾಗಿರುವ ಈಕೆ, ಬಣಕಲ್ ರಿವರ್ ವೀವ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಬಣಕಲ್ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿನಿಯಾಗಿದ್ದಾರೆ.
Next Story