ತಲಪಾಡಿ:ಜ.11 ರಂದು ಏಕದಿನ ಸಲಫಿ ಸಮ್ಮೇಳನ

ಉಳ್ಳಾಲ: ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ತಲಪಾಡಿ,ಮಸ್ಜುದುಲ್ ಅಬ್ರಾರ್ ಇದರ ಆಶ್ರಯದಲ್ಲಿ ಏಕದಿನ ಸಲಫಿ ಸಮ್ಮೇಳನ ಮತ್ತು ಎರಡನೇ ಸನದು ದಾನ ಕಾರ್ಯಕ್ರಮ ಜ.11 ರಂದು ಅಬ್ರಾರ್ ನಗರ ತಲಪಾಡಿ ಯಲ್ಲಿ
ನಡೆಯಲಿದ್ದು ,ಭಾನುವಾರ ಬೆಳಿಗ್ಗೆ 9:30 ರಿಂದ ರಾತ್ರಿ 10:00 ರವರೆಗೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಎಸ್.ಕೆ.ಎಸ್.ಎಂ.ಯೂತ್.ಕಾರ್ಯದರ್ಶಿಶಿಹಾಬ್ ತಲಪಾಡಿ ಹೇಳಿದರು.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕಾರ್ಯಕ್ರಮ ಪ್ರಯುಕ್ತ ಭಾನುವಾರ ಬೆಳಿಗ್ಗೆ 9.30 ಕ್ಕೆ ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ತಲಪಾಡಿ ಘಟಕದ ಅಧೀನದ ದಾರುಲ್ ಉಲೂಮ್ ಮಹಿಳಾ ಕಾಲೇಜು ವಿದ್ಯಾರ್ಥಿಗಳ ಮಹಿಳಾ ಸಮಾವೇಶ,ಎರಡನೇ ಸನದುದಾನ, ಅಸರ್ ನಮಾಝ್ ಬಳಿಕ ದ ಅವಾ ಸಮಾವೇಶ, ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.
ಶೇಖ್ ಸುಲ್ತಾನ್ ಸಯೀದ್ ಬಿಲಾಲ್,ಮೌಲವಿ ಅನ್ಸಾರ್ ನನ್ಮಂಡ , ಮೌಲವಿ ಮುನೀರ್ ಮದನಿ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ
ಎಂದರು.
ಸುದ್ದಿ ಗೋಷ್ಠಿಯಲ್ಲಿ ಅಬ್ರಾರ್ ಮಸೀದಿ ಉಪಾಧ್ಯಕ್ಷ ಹಮ್ಮದ್ ಕೆ.ಸಿ ರೋಡ್, ಕಾರ್ಯದರ್ಶಿ ಹುಸೈನ್ ಯಾನೆ ಐಸನ್ ಸಮಿತಿ ಸದಸ್ಯ ರಾದ ಇಬ್ರಾಹಿಂ ಮಾಡೂರು , ಅಬೂಬಕ್ಕರ್ ಕೊಲಂಗರೆ ಉಪಸ್ಥಿತರಿದ್ದರು.





