ಝಹ್ರಾ ಚಾರಿಟೇಬಲ್ ಎಜ್ಯುಕೇಶನಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭ

ಪುತ್ತೂರು: ಝಹ್ರಾ ಚಾರಿಟೇಬಲ್ ಎಜ್ಯುಕೇಶನಲ್ ಟ್ರಸ್ಟ್ ಹೆಣ್ಮಕ್ಕಳ ಧಾರ್ಮಿಕ ವಿದ್ಯಾ ಸಂಸ್ಥೆ ವತಿಯಿಂದ ಕುರ್‌ಆನ್ ಹಾಫಿಝ್ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭವು ಇತ್ತೀಚೆಗೆ ದರ್ಬೆ, ಕೂರ್ನಡ್ಕದಲ್ಲಿರುವ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಝಹ್ರಾ ಚಾರಿಟೇಬಲ್ ಎಜ್ಯುಕೇಶನಲ್ ಟ್ರಸ್ಟ್'ನ ಆಡಳಿತ ನಿರ್ದೇಶಕಿ ನಸೀಮಾರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರಾ ಅಲಿ ಫೌಂಡೇಶನ್ ಆಡಳಿತ ನಿರ್ದೇಶಕಿ ಸಾರಾ ಅಬ್ಬಾಸ್ ಸೈದಾಲಿ ಮತ್ತು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯೆ ಸಾರಾ ಅಲಿ ಪರ್ಲಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಂಸ್ಥೆಗೆ ಶುಭ ಹಾರೈಸಿದರು.
ವಿದ್ಯಾರ್ಥಿನಿಗಳಾದ ಶಾಹಿದಾ ಮತ್ತು ರಿಷ್ಮಾ (ಕನ್ನಡ), ಇಶಾ (ಮಲಯಾಳಂ), ಮರಿಯಮ್ (ಅರೇಬಿಕ್) ನಿಶಾ (ಇಂಗ್ಲೀಷ್) ಭಾಷಣ ಮಾಡಿದರು. ನಶ್ವಾ ಹದೀಸ್, ರೂಹಿ ಮತ್ತು ಆಲಿಯಾ - ಕಿರಾಅತ್, ಹಿಬಾ ಇಸ್ಲಾಮಿಕ್ ಹಾಡು, ಶಝ್ಮಾ ಮತ್ತು ಅಲಿಶ್ಬಾ - ಕುರ್'ಆನ್ ಪಾರಾಯಣ ಮತ್ತು ಅರ್ಥ ವಿಶ್ಲೇಷಣೆ, ಶಿಝಾ - ಅರೇಬಿಕ್ ಹಾಡು, ಶಝಾ - ದುವಾ ಓದು, ನಿದಾ - ಇಸ್ಲಾಮ್ ತತ್ವಗಳು ಹೀಗೇ ಅನೇಕ ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ಪ್ರತಿಭೆಯನ್ನು ಅನಾವರಣಗೊಳಿಸಿದರು.
ವಿದ್ಯಾರ್ಥಿನಿ ಇನಾರ ಪ್ರಾರ್ಥನೆ ಮತ್ತು ಅಸ್ನಾ ರವರ ಕಿರಾಅತ್ ಪಠಣದೊಂದಿಗೆ ಚಾಲನೆ ಗೊಂಡ ಸಮಾರಂಭದಲ್ಲಿ ಯು.ಎಸ್. ಹಿಬಾ ಫಾತಿಮಾ, ಸಲ್ಹಾ ಫಾತಿಮಾ ಹಾಗೂ ಖದೀಜಾ ಸಮ್ರಾ ಅಭಿಪ್ರಾಯಗಳನ್ನು ಮಂಡಿಸಿದರು.
ಸಂಸ್ಥೆಯ ಶಿಕ್ಷಕಿಯರಾದ ಅಲ್ ಹಾಫಿಝಾ ನಹೀಝಾ ಮತ್ತು ರಮೀನಾ ಮಾತನಾಡಿ, ಸಂಸ್ಥೆಯ ಕಾರ್ಯವೈಖರಿ ಹಾಗೂ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಭಾಗವಹಿಸಿದ ಅತಿಥಿಗಳು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಸ್ಮರಣಿಕೆಗಳನ್ನು ನೀಡಿ ಅಭಿನಂದಿಸಿದರು.
ಹಿಫ್ಝ್ ಪಾರಾಯಣ ಮತ್ತು ಕುರ್‌ಆನ್ ಕಂಠಪಾಠ ಮಾಡಿ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳ ಪೋಷಕರು ಉಡುಗೊರೆಗಳನ್ನು ನೀಡಿ ಅಭಿನಂದಿಸಿದರು.
ಸಂಸ್ಥೆಯ ಹಿಫ್ಝ್ ವಿದ್ಯಾರ್ಥಿಗಳಾದ ಆಯಿಷಾ ಶಝ್ಮಾ, ನಸೀಬಾ, ಶಝ್ಮಾ ಫಾತಿಮಾ, ರುಶ್ದಾ ಫಾತಿಮಾ, ಫಾತಿಮತ್ ರಿಶಾ, ಝುಬೈದಾ ಸಹ್ಲಾ, ಆಯೇಷಾ ಅಶ್ಫಿಯಾ, ಆಯಿಷಾ ಹಯಾ, ಫಾತಿಮತ್ ಹಿನಾ, ರಿಹ್ನಾ, ಫಸೀಲಾ, ರಿಝಾ, ಶಿಝಾ, ಸ್ವಾಲಿಹಾ, ಹೈಝಾ, ರಿಂಷಾ, ಆಲಿಯಾ ಸಮಿನಾ, ಇಶಾ, ಇಫಾ, ಶಿಝಾ, ರಮೀನಾ, ನಿಹಾ, ಶುಹೈದಾ, ಸಾದಾ, ಸನಾ, ತಸ್ಮಿಯಾ, ಅಲೀಝಾ ಮತ್ತು ನೂರಾ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಶಝ್ಮಾ ಸ್ವಾಗತಿಸಿ, ಸಹ್ಲಾ ಕಾರ್ಯಕ್ರಮ ನಿರೂಪಿಸಿದರು.