ಬೆಳ್ತಂಗಡಿ: ಜಾನುವಾರುಗಳ ಮೇವು ಸಾಗಿಸುತ್ತಿದ್ದ ಟೆಂಪೋ ಪಲ್ಟಿ

ಬೆಳ್ತಂಗಡಿ: ಜಾನುವಾರುಗಳ ಮೇವು ಸಾಗಿಸುತ್ತಿದ್ದ ವಾಹನವೊಂದು ಉರುಳಿ ಬಿದ್ದ ಘಟನೆ ರವಿವಾರ ತಡರಾತ್ರಿ ನಡೆದಿದೆ.
ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಕಲ್ಮಂಜ ಗ್ರಾಮದ ನಿಡಿಗಲ್ ಎಂಬಲ್ಲಿ ಚಾರ್ಮಾಡಿ ಕಡೆಯಿಂದ ಉಜಿರೆ ಕಡೆ ಜಾನುವಾರುಗಳ ಮೇವು ಸಾಗಿಸುತ್ತಿದ್ದ ಟೆಂಪೋ ಮುಂಭಾಗದಿಂದ ಬಂದ ಆಟೋರಿಕ್ಷಾಕ್ಕೆ ಸೈಡ್ ಕೊಡುವಾಗ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದು ಟೆಂಪೋದಲ್ಲಿದ್ದ ಚಾಲಕ ಸಹಿತ ಇನ್ನೊಬ್ಬ ಅಪಾಯದಿಂದ ಪಾರಾಗಿದ್ದಾರೆ.
ಈ ಸ್ಥಳದಲ್ಲಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಾಗಿ ರಸ್ತೆಯನ್ನು ಅಗೆದು ಹಾಕಲಾಗಿದ್ದು, ಭಾರಿ ಮಳೆಯು ಸುರಿಯುತ್ತಿದ್ದ ಕಾರಣ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
Next Story





