ವಿಟ್ಲ: ಆರ್ಟ್ ಆಫ್ ಪೇರೆಂಟಿಂಗ್ ಕಾರ್ಯಕ್ರಮ

ವಿಟ್ಲ: ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ಮತ್ತು ಬಂಟ್ವಾಳ ಜಂಇಯ್ಯತುಲ್ ಫಲಾಹ್ ಜಂಟಿ ಆಶ್ರಯದಲ್ಲಿ ಆರ್ಟ್ ಆಫ್ ಪೇರೆಂಟಿಂಗ್ ಮಾಣಿ ಜನಪ್ರಿಯ ಗಾರ್ಡನ್ ನಲ್ಲಿ ಬುಧವಾರ ನಡೆಯಿತು.
ಜನಪ್ರಿಯ ಫೌಂಡೇಶನ್ ಚೇಯರ್ಮ್ಯಾನ್ ಡಾ.ವಿ.ಕೆ ಅಬ್ದುಲ್ ಬಶೀರ್ ಅವರು ಮಾತನಾಡಿ ಜನಪ್ರಿಯ ಶಿಕ್ಷಣ ಸಂಸ್ಥೆಯಲ್ಲಿ ಮೌಲ್ಯಾಧಾರಿತ ಶಿಕ್ಷಣ ನೀಡಲಾಗುತ್ತಿದೆ. ಕಡಿಮೆ ಅವಧಿಯಲ್ಲಿ ಸಂಸ್ಥೆ ಅಭಿವೃದ್ಧಿ ಹೊಂದಿ, ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ತರಬೇತುದಾರ ಅಬ್ದುಲ್ ರಝಾಕ್ ಅನಂತಾಡಿ ಮಕ್ಕಳ ಮೇಲೆ ಹೆತ್ತವರಿಗೆ ದೊಡ್ಡ ಜವಾಬ್ದಾರಿ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಕಾಲಹರಣ ಮಾಡುವ ಸಮಯವನ್ನು ಮಕ್ಕಳಿಗೆ ವಿನಿಯೋಗಿಸಿದರೆ, ಅವರ ಅಭಿವೃದ್ಧಿಗೆ ಪೂರಕವಾಗು ತ್ತದೆ. ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀಳುವುದಕ್ಕೆ ಕಾರಣರಾಗಬಾರದು. ಭಾವನೆಗಳಿಗೆ ಸ್ಪಂದಿಸಬೇಕು ಎಂದರು.
ಜನಪ್ರಿಯ ಶಾಲಾ ಸಲಹೆಗಾರ ತರಬೇತುದಾರ ಡಾ. ರವಿಕುಮಾರ್ ಮಾತನಾಡಿ ಮಕ್ಕಳನ್ನು ಇನ್ನೊಂದು ಮಕ್ಕಳಿಗೆ ಹೋಲಿಕೆ ಮಾಡಬಾರದು. ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು. ಇದು ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.
ಬಂಟ್ವಾಳ ಜಂಇಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ, ಜನಪ್ರಿಯ ಫೌಂಡೇಶನ್ ಅಧ್ಯಕ್ಷೆ ಫಾತಿಮಾ ನಸ್ರೀನ ಬಶೀರ್, ನಿರ್ದೇಶಕ ನೌಸೀನ್ ಬದ್ರಿಯಾ, ಇಸ್ಮಾಯಿಲ್ ಬದ್ರಿಯಾ, ಶಾಲಾ ಆಡಳಿತಾಧಿಕಾರಿ ಸಫ್ವಾನ್ ಪಿಲಿಕಲ್, ಅಬ್ದುಲ್ ಅಝೀಝ್ ಬಸ್ತಿಕಾರ್,ಅಬೂಬಕ್ಕರ್ ಪುತ್ತು, ಸುಲೈಮಾನ್ ಸೂರಿಕುಮೇರು ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಪ್ರಾಂಶುಪಾಲ ಲಿಬಿನ್ ಝೇವಿಯರ್ ಸ್ವಾಗತಿಸಿದರು. ಶಿಕ್ಷಕಿಯರಾದ ಗುಣಾವತಿ, ರಶ್ಮಿ ನಿರೂಪಿಸಿದರು. ಆಡಳಿತಾಧಿಕಾರಿ ಸಫ್ವಾನ್ ಪಿಲಿಕಲ್ ವಂದಿಸಿದರು.







