Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಹಡಗುಗಳಿಗೆ ಐಎನ್‌ಎಸ್ ಮುಲ್ಕಿ, ಐಎನ್‌ಎಸ್...

ಹಡಗುಗಳಿಗೆ ಐಎನ್‌ಎಸ್ ಮುಲ್ಕಿ, ಐಎನ್‌ಎಸ್ ಮಲ್ಪೆ ಹೆಸರು

ವಾರ್ತಾಭಾರತಿವಾರ್ತಾಭಾರತಿ11 Sept 2024 7:35 PM IST
share
ಹಡಗುಗಳಿಗೆ ಐಎನ್‌ಎಸ್ ಮುಲ್ಕಿ, ಐಎನ್‌ಎಸ್ ಮಲ್ಪೆ ಹೆಸರು

ಮಂಗಳೂರು: ಭಾರತೀಯ ನೌಕಾಪಡೆಯು ಎರಡು ಹಡಗುಗಳಿಗೆ ಕರಾವಳಿಯ ಎರಡು ಪ್ರಮುಖ ಪಟ್ಟಣದ ಹೆಸರನ್ನು ಇಟ್ಟಿವೆ. ಅಂದರೆ ಒಂದು ಹಡಗಿಗೆ ಐಎನ್‌ಎಸ್ ಮುಲ್ಕಿ ಮತ್ತು ಇನ್ನೊಂದು ಹೆಸರಿಗೆ ಐಎನ್‌ಎಸ್ ಮಲ್ಪೆ ಹೆಸರು ನಮೂದಿಸಿವೆ.

ಎದುರಾಳಿ ಪಡೆಯ ಸಬ್‌ಮೇರೀನ್‌ಗಳನ್ನು ಪತ್ತೆ ಮಾಡುವ ಕ್ಷಮತೆ ಇರುವ ಐಎನ್‌ಎಸ್ ಮುಲ್ಕಿ ಹಾಗೂ ಐಎನ್‌ಎಸ್ ಮಲ್ಪೆ ಎಂಬ ಎರಡೂ ಹಡಗುಗಳನ್ನೂ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ನಿರ್ಮಾಣ ಮಾಡಲಾಗುತ್ತದೆ.

ಅಂದಹಾಗೆ, ಈ ಹೆಸರು ಹಿಂದೆಯೂ ಇತ್ತು. ಅಂದರೆ ರಶ್ಯಾದಿಂದ ಆಮದು ಮಾಡಿಕೊಳ್ಳಲಾಗಿದ್ದ 6 ಮೈನ್‌ಸ್ವೀಪಿಂಗ್ ನೌಕೆಗಳಲ್ಲಿ ಇವು ಸೇರಿತ್ತು. 1984ರಿಂದ 2003(ಮುಲ್ಕಿ) ಹಾಗೂ 2006(ಮಲ್ಪೆ)ರವರೆಗೆ ಕಾರ್ಯಾಚರಿಸಿದ್ದ ಈ ನೌಕೆ ಗಳನ್ನು ಮುಖ್ಯವಾಗಿ ಸಮುದ್ರ ತಟದಲ್ಲಿ ಕಡಲಿನ ಮೈನ್ ಸ್ಪೋಟಕ ಪತ್ತೆ ಮಾಡುವುದಕ್ಕೆ ಬಳಸಲಾಗುತ್ತಿತ್ತು. ಇವೆರಡನ್ನೂ ಬಳಿಕ ಸೇವೆಯಿಂದ ನಿವೃತ್ತಿಗೊಳಿಸಲಾಗಿತ್ತು.

ನೌಕಾಪಡೆ ಹಡಗುಗಳಿಗೆ ಸಾಮಾನ್ಯವಾಗಿ ನದಿಗಳ ಹೆಸರು (ಐಎನ್‌ಎಸ್ ಗಂಗಾ, ಐಎನ್‌ಎಸ್ ಬ್ರಹ್ಮಪುತ್ರ), ನಗರಗಳ ಹೆಸರು (ಐಎನ್‌ಎಸ್ ಮೈಸೂರ್, ಐಎನ್‌ಎಸ್ ಮುಂಬೈ), ಕೋಟೆ ಹೆಸರು (ಐಎನ್‌ಎಸ್ ಸಿಂಧುದುರ್ಗ) ಇತ್ಯಾದಿ ಇರಿಸಲಾಗುತ್ತದೆ. ಇದಕ್ಕೆಂದೇ ಒಂದು ಆಂತರಿಕ ಹಡಗು ನಾಮಕರಣ ಸಮಿತಿಯೇ ಇದೆ.

ಹೊಸದಾಗಿ ಎರಡು ಹಡಗಿಗೆ ಈ ಹೆಸರು ನಮೂದಿಸಲು ಕಾರಣವೂ ಇದೆ. ಅಂದರೆ ನೌಕಾಪಡೆಯಲ್ಲಿ 150ಕ್ಕೂ ಅಧಿಕ ಹಡಗುಗಳಿದ್ದು, ಹೆಸರುಗಳನ್ನು ಸಾಮಾನ್ಯವಾಗಿ ಪುನರಾವರ್ತಿಸುತ್ತಾರೆ ಎಂದು ಮುಲ್ಕಿಯವರೇ ಆದ ನಿವೃತ್ತ ನೇವಲ್ ಅಧಿಕಾರಿ ವೈಸ್ ಅಡ್ಮಿರಲ್ ಬಿ. ಆರ್.ರಾವ್ ಅಭಿಪ್ರಾಯಪಟ್ಟಿದ್ದಾರೆ.

ಹಿಂದೆ ಮುಲ್ಕಿ ರಾಜ್ಯದ ಪ್ರಮುಖ ಬಂದರುಗಳಲ್ಲಿ ಒಂದಾಗಿತ್ತು, ಆವಾಗ ದೇಶ ವಿದೇಶಗಳಿಂದ ಸಣ್ಣ ಹಡಗುಗಳು ಮುಲ್ಕಿ ಸಮುದ್ರದವರೆಗೆ ಬಂದು ಅಲ್ಲಿಂದ ಶಾಂಭವಿ ನದಿಯ ಒಳಗೆ ಬರುತ್ತಿತ್ತು. ಪ್ರಮುಖ ವಾಣಿಜ್ಯ ಚಟುವಟಿಕೆಗೆ ಆಗ ಮುಲ್ಕಿಯು ಕೇಂದ್ರವಾಗಿತ್ತು. 1930ರಿಂದ 1960ರವರೆಗೆ ಪ್ರಯಾಣಿಕರ ಸ್ಟೀಮರ್ ನೌಕೆಗಳೂ ಇಲ್ಲಿಗೆ ಬಂದು ಹೋಗುತ್ತಿದ್ದವು. ಉಡುಪಿಯಿಂದ ಮಂಗಳೂರಿಗೆ ಹೋಗಲು ಫೆರ್ರಿ ಮೂಲಕ ಜನರು ಇಲ್ಲಿ ನದಿ ದಾಟುತ್ತಿದ್ದರು. ಹಾಗಾಗಿಯೇ ಬ್ರಿಟಿಷರ ಕಾಲದಲ್ಲೇ ಕಡಲ ನಕ್ಷೆಯಲ್ಲಿ ಮೂಲ್ಕಿ ಹಾಗೂ ಮಲ್ಪೆ ಹೆಸರುಗಳಿದ್ದವು.

ಆದರೆ ಶಾಂಭವಿ ನದಿಗೆ 1960ರಲ್ಲಿ ಸೇತುವೆ ನಿರ್ಮಾಣಗೊಂಡ ಬಳಿಕ ಮುಲ್ಕಿ ಎನ್ನುವ ಬಂದರು ತನ್ನ ಮಹತ್ವ ಕಳೆದು ಕೊಂಡಿತು. ಈಗ ಇಲ್ಲಿ ಎರಡು ಸೇತುವೆಗಳಿರುವುದರಿಂದ ಮೂಲ್ಕಿ ಶಾಶ್ವತವಾಗಿ ಬಂದರು ಸ್ಥಾನವನ್ನು ಕಳೆದುಕೊಂಡಿತ್ತು. ಇದೀಗ ನೌಕಾಪಡೆಯ ಹಡಗಿನಿಂದಾಗಿ ಮತ್ತೆ ಹಳೆಯ ನೆನಪೂ ಮರುಕಳಿಸಲಿದೆ ಎಂದು ಹೇಳಲಾಗುತ್ತಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X