ತುಳುನಾಡಿನ ಕಣ್ಣೀರಿನ ಕತೆಗಳು ಮಾದರಿಯಾಗಬೇಕು: ಡಾ. ಸುಧಾರಾಣಿ
ಪಡುಬಿದ್ರಿಯಲ್ಲಿ ಆಟಿದ ಗಮ್ಮತ್ತ್ ಕಾರ್ಯಕ್ರಮ

ಪಡುಬಿದ್ರಿ: ಆಟಿ ತಿಂಗಳಲ್ಲಿ ತುಳುನಾಡಿನ ಆಹಾರ ಪದ್ಧತಿ, ಕೆಲಸ ಕಾರ್ರ್ಯಗಳು, ಆ ದಿನದ ಬಡತನದ ಬದುಕಿನ ಕಣ್ಣೀರಿನ ಕತೆಗಳು ನಮಗೆ ಇಂದು ಮಾದರಿಯಾಗಬೇಕಾಗಿದೆ ಎಂದು ಮೂಡಬಿದ್ರಿಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಡಾ. ಸುಧಾರಾಣಿ ಹೇಳಿದರು.
ಪಡುಬಿದ್ರಿಯ ಸುಜಾತಾ ಆಡಿಟೋರಿಯಂನಲ್ಲಿ ರೋಟರಿ ಕ್ಲಬ್, ಇನ್ನರ್‍ವೀಲ್ ಕ್ಲಬ್, ರೋಟರಿ ಸಮುದಾಯದಳ, ರೋಟರ್ಯಾಕ್ಟ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಆಟಿದ ಗಮ್ಮತ್ತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆಟಿ ಮತ್ತು ಮಾಯಿ ತಿಂಗಳು ತುಳುವರಿಗೆ ಕೃಷಿ ಬದುಕು ಕಟ್ಟಿಕೊಂಡುವ ತಿಂಗಳಾಗಿವೆ. ಒಂದೆಡೆ ಆಟಿ ತಿಂಗಳಲ್ಲಿ ಜೋರಾದ ಮಳೆ ಇಲ್ಲವೇ ಜೋರಾದ ಬಿಸಿಲು ಸಾಮಾನ್ಯವಾಗಿತ್ತು. ತುಳುವ ಜನರು ಹೆಣ್ಣು, ಹೊನ್ನು, ಮಣ್ಣು ಮಾಯೆ ಎನ್ನುವವರಲ್ಲ. ಹೆಣ್ಣು, ಮಣ್ಣು, ಸತ್ಯ ಎನ್ನುವವರು ಎಂದು ಅವರು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಉಪನ್ಯಾಸಕಿ ಡಾ. ಸುಧಾರಾಣಿ ಅವರನ್ನು ಸನ್ಮಾನಿಸಲಾಯಿತು. ಪಡುಬಿದ್ರಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ವೈ. ಸುಕುಮಾರ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನವೀನ್‍ಚಂದ್ರ ಜೆ. ಶೆಟ್ಟಿ, ರೋಟರಿ ಕ್ಲಬ್ ಸಹಾಯಕ ಗವರ್ನರ್ ಶೈಲೇಂದ್ರ ರಾವ್ ಮಾತನಾಡಿದರು.
ಅವರು ರೋಟರಿ ಕ್ಲಬ್ ಅಧ್ಯಕ್ಷ ಸಂತೋಷ್ ಪಡುಬಿದ್ರಿ ಅಧ್ಯಕ್ಷತೆ ವಹಿಸಿದ್ದರು. ಇನ್ನರ್‍ವೀಲ್ ಕ್ಲಬ್ ಅಧ್ಯಕ್ಷೆ ನಮೃತಾ ಮಹೇಶ್, ರೋಟರ್ಯಾಕ್ಟ್ ಕ್ಲಬ್‍ನ ಪ್ರತಿನಿಧಿ ಶೃತಿ ಶೆಣೈ, ರೋಟರಿ ಸಮುದಾಯ ದಳದ ಅಧ್ಯಕ್ಷ ರಚನ್ ಸಾಲ್ಯಾನ್, ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ತನಿಷಾ ಜಿ. ಕುಕ್ಯಾನ್ ರೋಟರಿ ಕ್ಲಬ್ ಕಾರ್ಯದರ್ಶಿ ಪವನ್ ಸಾಲ್ಯಾನ್, ಇನ್ನರ್‍ವೀಲ್ ಕ್ಲಬ್ ಕಾರ್ಯದರ್ಶಿ ಮನೋರಮ ಮೇಘನಾಥ್, ರೋಟರಿ ಸಮುದಾಯ ದಳದ ಕಾರ್ಯದರ್ಶಿ ಪ್ರತೀಕ್ ಶೆಟ್ಟಿ, ರೋಟರ್ಯಾಕ್ಟ್ ಕ್ಲಬ್ ಕಾರ್ಯದರ್ಶಿ ಪ್ರತೀಕ್ ಆಚಾರ್ಯ, ಕಾರ್ಯಕ್ರಮ ನಿರ್ದೇಶಕರಾದ ಪಿ.ಕೃಷ್ಣ ಬಂಗೇರ, ಶುಭ ದಿನೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಬಳಿಕ ಇನ್ನರ್‍ವೀಲ್ ಕ್ಲಬ್‍ನ ಸದಸ್ಯರಿಂದ ಹಾಗೂ ಮಕ್ಕಳಿಂದ ತುಳುನಾಡಿನ ಸಂಸ್ಕೃತಿ ಸಾರುವ ನೃತ್ಯ ಗಳು ನಡೆಯಿತು. ಮನೆಗಳಲ್ಲಿ ತಯಾರಿಸಿದ ವಿವಿಧ ಬಗೆಯ ಆಹಾರಗಳ ಪ್ರದರ್ಶನಗಳು ಗಮನಸೆಳೆಯಿತು.
ತುಳುನಾಡಿನ ಸಂಸ್ಕೃತಿಯ ಬಗೆ ಮತ್ತು ಇತಿಹಾಸದ ಬಗೆ ನಡೆದ ರಸ ಪ್ರಶ್ನೆಯಲ್ಲಿ ಪ್ರಥಮ ಸುನೀಲ್, ದ್ವಿತೀಯ ಅವಿತಾ, ತೃತೀಯ ದೀಪಾ ಶ್ರೀ ಕರ್ಕೇರಾ ಬಹುಮಾನ ಪಡೆದರು. ಬಿ.ಎಸ್. ಆಚಾರ್ಯ ರಸ ಪ್ರಶ್ನೆಯ ಕಾರ್ಯಕ್ರಮ ನಿರೂಪಿಸಿ ದರು. ಸಂತೋಷ್ ಪಡುಬಿದ್ರಿ ಸ್ವಾಗತಿಸಿದರು. ಪವನ್ ಸಾಲ್ಯಾನ್ ವಂದಿಸಿದರು. ರಾಜೇಶ್ ಶೇರಿಗಾರ್, ಕಾರ್ಯಕ್ರಮ ನಿರೂಪಿಸಿದರು.







