Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಸೃಜನಾತ್ಮಕ ವಿಚಾರಗಳನ್ನು ಬೆಂಬಲಿಸುವ...

ಸೃಜನಾತ್ಮಕ ವಿಚಾರಗಳನ್ನು ಬೆಂಬಲಿಸುವ ಉಳ್ಳಾಲ ತಾಲೂಕು ಪತ್ರಕರ್ತರ ಸಂಘದ ಕಾರ್ಯ ಶ್ಲಾಘನೀಯ : ಎ.ಉಮೇಶ್ ಗಟ್ಟಿ

ʼತಿಂಗಳ ಬೆಳಕು-ಗೌರವ ಕಾರ್ಯಕ್ರಮʼ

ವಾರ್ತಾಭಾರತಿವಾರ್ತಾಭಾರತಿ12 March 2025 9:48 AM IST
share
Photo of Program

ಉಳ್ಳಾಲ : ಸೃಜನಾತ್ಮಕ ವಿಚಾರಗಳನ್ನು ಒಳಗೊಂಡು ಸ್ವಯಂಪ್ರೇರಣೆಯಿಂದ ಸಮಾಜಮುಖಿ ಕಾರ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಳ್ಳಾಲ ತಾಲೂಕು ಪತ್ರಕರ್ತರ ಸಂಘದ ಕಾರ್ಯ ಶ್ಲಾಘನೀಯ ಎಂದು ಎಂದು ಮೆಸ್ಕಾಂ ಮಂಗಳೂರು ಇದರ ಲೆಕ್ಕ ನಿಯಂತ್ರಣಾಧಿಕಾರಿ, ದ.ಕ ಜಿಲ್ಲಾ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ನ ಅಧ್ಯಕ್ಷ ಎ.ಉಮೇಶ್ ಗಟ್ಟಿ ಜೆಪ್ಪು ಹೇಳಿದರು.

ತೊಕ್ಕೊಟ್ಟು ಸೇವಾಸೌಧದಲ್ಲಿರುವ ಪ್ರೆಸ್ ಕ್ಲಬ್ ಉಳ್ಳಾಲ ಆಯೋಜಿಸಿದ ʼತಿಂಗಳ ಬೆಳಕು-ಗೌರವ ಕಾರ್ಯಕ್ರಮʼದಲ್ಲಿ ಕಾಪಿಕಾಡು ಉಳ್ಳಾಲದ ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿ ಹಾಗೂ ಪ್ರೋ ಕಬಡ್ಡಿಗೆ ಆಯ್ಕೆಗೊಂಡ ಅಕಾಡೆಮಿಯ ಮೂವರು ಸಾಧಕರಿಗೆ ಗೌರವ ಸಲ್ಲಿಸಿ ಮಾತನಾಡಿದರು.

ಸಾಧನೆಗಳಿಗೆ ಯಾವುದೇ ಶಾರ್ಟ್ ಕಟ್ ಗಳಿರುವುದಿಲ್ಲ. ಅಲ್ಲಿ ಶ್ರಮವೇ ಮುಖ್ಯವಾಗಿರುತ್ತದೆ. ಇಶಾ ಪಟೇಲ್, ಜಯರಾಮ ಶೆಟ್ಟಿ ತರಬೇತಿ ಪಡೆಯುತ್ತಿದ್ದ ಕ್ರೀಡಾಂಗಣಗಳಲ್ಲಿ ತಾವು ಕೂಡ ತರಬೇತಿಗಳನ್ನು ಪಡೆದುಕೊಳ್ಳುತ್ತಿದ್ದೆವು. ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿಯಲ್ಲಿ ಒಳ್ಳೆಯ ಮನಸ್ಸುಗಳು ಸಮರ್ಪಣಾ ಭಾವದೊಂದಿಗೆ ಕಾರ್ಯನಿರ್ವಹಿಸುತ್ತಾ ಬಂದಿದೆ. ಈ ಮೂಲಕ ಉದಯೋನ್ಮುಖ ಬೆಳೆಯುವವರನ್ನು ಗುರುತಿಸಿ ಬೇರೆಯವರಿಗೆ ಮಾರ್ಗದರ್ಶಿಯಾಗುತ್ತಿದ್ದಾರೆ ಎಂದರು.

ಕೆಪಿಟಿಸಿಎಲ್ ಸ್ಪೋರ್ಟ್ಸ್ ಬೋರ್ಡಿನಲ್ಲಿ ಸದಸ್ಯನಾಗಿದ್ದ ಅವಧಿಯಲ್ಲಿ ಅಂದಿನ ಸಚಿವೆ ಶೊಭಾ ಕರಂದ್ಲಾಜೆಯವರಿದ್ದ ಸಂದರ್ಭ ಸ್ಪೋರ್ಟ್ಸ್ ಕೋಟಾದಡಿ 20 ಮಂದಿಗೆ ಉದ್ಯೊಗಾವಕಾಶ ಕಲ್ಪಿಸುವಂತೆ ಒತ್ತಡವನ್ನು ಹೇರಿದ್ದೆ. ಆದರೆ ಕಾರಣಾಂತರಗಳಿಂದ ಅದು ಮುಂದೆ ಹೋಗಿರಲಿಲ್ಲ. ಆದರೆ ಸದ್ಯ ಶೇ.2ರಷ್ಟು ಸ್ಪೋರ್ಟ್ಸ್ ಕೋಟಾದಡಿ ಉದ್ಯೊಗಾವಕಾಶದ ಕಾನೂನು ಜಾರಿಯಾದಲ್ಲಿ ಊರಿನ ಕ್ರೀಡಾ ಸಾಧಕರು, ಪ್ರತಿಭಾವಂತರಿಗೆ ಅವಕಾಶ ದೊರೆಯಬಹುದು. ಮಾಧ್ಯಮಗಳು ಈ ಕುರಿತು ಬೆಳಕು ಚೆಲ್ಲಬೇಕಿದೆ ಎಂದರು.

ಗೌರವ ಸ್ವೀಕರಿಸಿದ ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿ ಕಾಪಿಕಾಡ್ ಇದರ ಸಂಯೋಜಕ ಗೋಪಿನಾಥ್ ಕಾಪಿಕಾಡ್ ಮಾತನಾಡಿ, ತಾಯಿ ಉಮಾಮಹೇಶ್ವರಿ ಹೆಸರಿಗೆ ಕಳಂಕ ಬಾರದಂತೆ ಅಕಾಡೆಮಿ ಸ್ಥಾಪಿಸಲು ಉದ್ಯಮಿ ಎ.ಜೆ.ಶೇಖರ್ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ 9 ವರ್ಷಗಳ ಕಾಲ ಯಶಸ್ವಿಯಾಗಿ ಪೂರೈಸಿ ತಾಯಿಯ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿ ಮಾಡಿದೆ. ಅಕಾಡೆಮಿ ಸ್ಥಾಪಿಸುವುದು ಕಷ್ಟದ ವಿಚಾರ, 2016 ರಲ್ಲಿ ಚಂದ್ರಹಾಸ್ ಉಚ್ಚಿಲ್ ಕ್ರೀಡಾ ಜಾಗದಲ್ಲಿ ತರಬೇತಿ ಶೀಬಿರಗಳನ್ನು ಆರಂಭಿಸಲಾಯಿತು.

ಅಕಾಡೆಮಿ ಸದಸ್ಯರು ಪಂದ್ಯಾಟಕ್ಕೆ ಸಜ್ಜಾದಾಗ ಮ್ಯಾಟ್ ಒದಗಿಸಲು ಶಾಸಕ ಯು.ಟಿ.ಖಾದರ್ ಅವರಿಗೆ 2017 ರಲ್ಲಿ ಮನವಿ ಮಾಡಿದ ಫಲವಾಗಿ, 2020 ರಲ್ಲಿ ಸರಕಾರದಿಂದ ಅನುದಾನದಿಂದ ಮ್ಯಾಟ್ ಸಿಕ್ಕಿದೆ. ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನದ ಮೊಕ್ತೇಸರರು ಹಾಗು ಆಡಳಿತ ಸಮಿತಿ ಸದಸ್ಯರನ್ನು ಸ್ಮರಿಸುತ್ತೇವೆ. ಅವರೆಲ್ಲರ ಸಹಕಾರದಿಂದ ಒಳಾಂಗಣ ಕ್ರೀಡಾಂಗಣಕ್ಕೆ ಅವಕಾಶ ಸಿಕ್ಕಿದೆ. ಮಂಗಳೂರು ವಿ.ವಿ.ಯಲ್ಲಿ ಕಬಡ್ಡಿ ಕೋರ್ಸ್ ಮೊಟಕುಗೊಳ್ಳಲು ಆರಂಭವಾದಾಗ ಶಾಸಕರ ಬೆಂಬಲದೊಂದಿಗೆ ನಿರಂತರ ಹೋರಾಟ ನಡೆಸಿದ ಫಲವಾಗಿ ಮತ್ತೆ ತರಬೇತಿ ಮುಂದುವರಿದಿದೆ.

ಈಗಾಗಲೇ ಅಕಾಡೆಮಿಯಿಂದ 15 ಮಕ್ಕಳು ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯದಲ್ಲಿ ಚಿನ್ನದ ಪಕದ ಗಳಿಸಿದ್ದಾರೆ. ಅಂತರ್ ವಿಶ್ವವಿದ್ಯಾನಿಲಯದಲ್ಲಿ ಚಿನ್ನದ ಪದಕ ಗೆದ್ದಾಗ ಶಾಸಕ ಯು.ಟಿ.ಖಾದರ್ ಅವರು ಬೆಳಗಾವಿ ಅಧಿವೇಶನಕ್ಕೂ ಎಲ್ಲಾ ಆಟಗಾರರನ್ನು ಕರೆಸಿ ಕ್ರೀಡಾಮಂತ್ರಿ ನೇತೃತ್ವದಲ್ಲಿ ದೊಡ್ಡ ಸನ್ಮಾನ ನಡೆಸಿ 1 ಲಕ್ಷ ರೂ. ನಗದು ಬಹುಮಾನವೂ ನೀಡಿರುವುದು ಸ್ಮರಣೀಯ. ದಶಮ ಸಂಭ್ರಮದಲ್ಲಿ ಒಳ್ಳೆಯ ಕಾರ್ಯಕ್ರಮ ನಡೆಸಲು ತೀರ್ಮಾನ ನಡೆಸಿದ್ದೇವೆ. ಡಾ.ಕರುಣಾಕರ್ ಶೆಟ್ಟಿಯವರಂತಹ ನಿಸ್ವಾರ್ಥ ತರಬೇತುದಾರರಿಂದ ಅಕಾಡೆಮಿ ಯಶಸ್ವಿಪಥದಲ್ಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳ್ಳಾಲ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ್ ಎನ್.ಕೊಣಾಜೆ ವಹಿಸಿದ್ದರು.

ಈ ಸಂದರ್ಭ ಶ್ರೀ ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿ ಕಾಪಿಕಾಡ್ ಇದರ ಅಧ್ಯಕ್ಷ ಎ.ಜೆ.ಶೇಖರ್ ಸೇರಿದಂತೆ ಎ.ಉಮೇಶ್ ಗಟ್ಟಿ ಜೆಪ್ಪು ಹಾಗೂ ರಾಷ್ಟೀಯ ಕಬಡ್ಡಿ ಆಟಗಾರರಾದ ಸಾಯಿಪ್ರಸಾದ್, ಹಸನ್ ಮುಹಮ್ಮದ್ ನಿಶಾನ್ ಹಾಗೂ ಯಶರಾಜ್ ಬಗಂಬಿಲ ಇವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅನ್ಸಾರ್ ಇನೋಳಿ, ಸದಸ್ಯ ಮೋಹನ್ ಕುತ್ತಾರ್, ತಾಲೂಕು ಸಂಘದ ಕೋಶಾಧಿಕಾರಿ ಬಶೀರ್ ಕಲ್ಕಟ್ಟ, ಸದಸ್ಯರಾದ ಆಸೀಫ್ ಬಬ್ಬುಕಟ್ಟೆ, ಗಂಗಾಧರ್, ಸಫ್ವಾನ್ ಯು.ಆರ್ ಉಪಸ್ಥಿತರಿದ್ದರು.

ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾಯಿ ನಿರೂಪಿಸಿದರು. ಉಪಾಧ್ಯಕ್ಷ ದಿನೇಶ್ ನಾಯಕ್ ತೊಕ್ಕೊಟ್ಟು ಸ್ವಾಗತಿಸಿದರು. ಕಾರ್ಯದರ್ಶಿ ಡಾ.ಸತೀಶ್ ಕೊಣಾಜೆ ಉದ್ಘಾಟನಾ ವಿವರ ಓದಿದರು. ಪ್ರಧಾನ ಕಾರ್ಯದರ್ಶಿ ಶಶಿಧರ್ ಪೊಯ್ಯತ್ತಬೈಲ್ , ಕಾರ್ಯದರ್ಶಿ ವಜ್ರ ಗುಜರನ್, ಸದಸ್ಯೆ ಸುಷ್ಮಿತಾ ಸಾಮಾಣಿ ಸನ್ಮಾನಿತರ ವಿವರ ಓದಿದರು. ಉಪಾಧ್ಯಕ್ಷ ಆರೀಫ್ ಯು.ಆರ್. ವಂದಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X