VITTAL | ನ್ಯಾಯವಾದಿಯ ಮನೆಯಲ್ಲಿ ಕಳ್ಳತನ

ವಿಟ್ಲ: ನ್ಯಾಯವಾದಿಯೊಬ್ಬರ ಮನೆಗೆ ನುಗ್ಗಿದ ಕಳ್ಳರು ದಾಖಲೆಪತ್ರಗಳನ್ನು ಕಳುವುಗೈದ ಘಟನೆ ವಿಟ್ಲದ ಒಕ್ಕೆತ್ತೂರು ರೋಯಲ್ ವಿಲ್ಲಾ ಸಮೀಪ ನಡೆದಿದೆ.
ಅಡ್ವಕೇಟ್ ಸಫಿಯಾ ನೌಫಲ್ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ. ಮನೆಮಂದಿ ಒಂದು ತಿಂಗಳ ಹಿಂದೆ ವಿದೇಶಕ್ಕೆ ತೆರಳಿದ್ದು, ಸದ್ಯ ಮನೆಯಲ್ಲಿ ಯಾರು ಇಲ್ಲ. ಮನೆಯ ಮುಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟನ್ನೆಲ್ಲ ಜಾಲಾಡಿದ್ದಾರೆ. ಅದರಲ್ಲಿ ಏನೂ ಸಿಗದ ಕಾರಣ ನ್ಯಾಯವಾದಿಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಕೊಂಡೊಯ್ದಿದ್ದಾರೆ ಎಂದು ತಿಳಿದುಬಂದಿದೆ.
ಮನೆಯ ಬಾಗಿಲು ತೆರೆದಿರುವುದನ್ನು ಗಮನಿಸಿದ ಸ್ಥಳೀಯರು ಮನೆಯವರಿಗೆ ಮಾಹಿತಿ ನೀಡಿದ್ದಾರೆ.
Next Story





