ಕಳ್ಳತನ ಪ್ರಕರಣ : ಆರೋಪಿಯ ಬಂಧನ

ಪುತ್ತೂರು: ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ 10 ಕೆಜಿ ತೂಕದ, 8,000 ರೂ. ಮೌಲ್ಯದ ತಾಮ್ರದ ಗಂಟೆ ಕಳವು ಪ್ರಕರಣವನ್ನು ಪತ್ತೆ ಹಚ್ಚಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿದ ನಗರ ಠಾಣಾ ಪೊಲೀಸರು ಆರೋಪಿ ಪುತ್ತೂರು ತಾಲೂಕಿನ, ಕಬಕ ನಿವಾಸಿ ಸಂಶುದ್ದೀನ್ (50) ಎಂಬಾತನನ್ನು ಬಂಧಿಸಿದ್ದಾರೆ.
ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಜು.26ರಂದು ಸುಮಾರು 10 ಕೆಜಿ ತೂಕದ ಸುಮಾರು 8000 ರೂ ಬೆಲೆ ಬಾಳುವ ತಾಮ್ರದ ಗಂಟೆ ಕಳವು ಪ್ರಕರಣ ದಾಖಲಾಗಿತ್ತು. ಪ್ರಕರಣ ಕ್ಕೆ ಸಂಬಂಧಿಸಿದಂತೆ ಅ.ಕ್ರ :63/2025, ಕಲಂ: 303(2) BNS 2023 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಆರೋಪಿಯು ಹಿಂದೆ 2004ರಲ್ಲಿ ಪುತ್ತೂರು ನಗರ . 83/2004, 0 454, 380 ಪ್ರಕರಣದಲ್ಲೂ ಆರೋಪಿ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





