ರಾಜಕೀಯ ಲಾಭಕ್ಕೆ ನಮ್ಮ ಮಕ್ಕಳನ್ನು ದುರ್ಬಳಕೆ ಮಾಡುತ್ತಿದ್ದಾರೆ: ಕೊಲೆಯಾದ ಸುಹಾಸ್ ಶೆಟ್ಟಿಯ ತಂದೆ ಮೋಹನ್ ಶೆಟ್ಟಿ

ಮಂಗಳೂರು: ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ನಮ್ಮ ಮಕ್ಕಳನ್ನು ದುರ್ಬಳಕೆ ಮಾಡುತ್ತಿದ್ದಾರೆ. ಈ ವಯಸ್ಸಿನಲ್ಲಿ ನಮ್ಮ ಮಕ್ಕಳು ನಮ್ಮ ಕಣ್ಣಾರೆ ಸಾವಿಗೀಡಾದರೆ ಹೇಗೆ ಸಹಿಸಲು ಸಾಧ್ಯ?.
ಇದು ಗುರುವಾರ ರಾತ್ರಿ ಬಜ್ಪೆ ಸಮೀಪ ದುಷ್ಕರ್ಮಿಗಳಿಂದ ಹತ್ಯೆಯಾದ ಸುಹಾಸ್ ಶೆಟ್ಟಿಯ ತಂದೆ ಮೋಹನ್ ಶೆಟ್ಟಿಯ ಪ್ರಶ್ನೆ.
ನಮ್ಮ ಅಮಾಯಕ ಮಕ್ಕಳು ಹಿಂದೂ ಹಿಂದೂ ಅಂತ ಬೀದಿಗೆ ಇಳಿಯುತ್ತಾರೆ. ಮನೆಯ ಆಧಾರ ಸ್ತಂಭವಾಗಿದ್ದ ಅವನಿಗೆ ಕೇವಲ 31 ವರ್ಷ ಪ್ರಾಯ. ಈಗ ನಮಗೆ ಯಾರಿದ್ದಾರೆ ? ನಾಲ್ಕು ದಿನ ನಮ್ಮ ಮನೆಗೆ ಬಂದು ಸಮಾಧಾನ ಹೇಳಿ ಹೋಗುತ್ತಾರೆ. ಮತ್ತೆ ತಿರುಗಿಯೂ ನೋಡುವುದಿಲ್ಲ ಎಂದು ಹೇಳಿಕೊಂಡರು.
ಮಗನನ್ನು ಕಳೆದುಕೊಂಡಿದ್ದೇವೆ. ನಮಗಿನ್ನು ಯಾರೂ ಇಲ್ಲ. ಈ ವಯಸ್ಸಿನಲ್ಲಿ ಮಗನನ್ನು ಕಳಕೊಂಡು ಅಪ್ಪ-ಅಮ್ಮ ಆದ ನಾವು ಕೊರಗುವಂತಾಗಿದೆ ಎಂದು ಮೋಹನ್ ಶೆಟ್ಟಿ ಕಣ್ಣೀರಾದರು.
Next Story