ತುಂಬೆ | ಮೀಫ್ ವತಿಯಿಂದ ಶಾಲಾ ಬಾಲಕರ ವಾಲಿಬಾಲ್ ಪಂದ್ಯಾಟ

ತುಂಬೆ,ನ.20: ನಾನಾ ಸ್ಪರ್ಧೆಗಳಲ್ಲಿ ಆಟವಾಡುವುದು ಮತ್ತು ಅದರಲ್ಲಿ ಸೋಲು - ಗೆಲುವನ್ನು ಸಮಾನವಾಗಿ ಸ್ವೀಕರಿಸುವುದು ಓರ್ವ ಉತ್ತಮ ಸ್ಪರ್ಧಾಳುವಿನ ಲಕ್ಷಣವಾಗಿದೆ. ಮೀಫ್ ಸಂಸ್ಥೆಯು ಶಿಕ್ಷಣ ಕ್ಷೇತ್ರಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ನಿಸ್ವಾರ್ಥ ಮನೋಭಾವದಿಂದ ಕೊಡುವ ಕೊಡುಗೆಗಳು ಸ್ತುತ್ಯಾರ್ಹವಾಗಿದೆ ಎಂದು ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಬಿ.ಅಬ್ದುಲ್ ಸಲಾಂ ಹೇಳಿದರು.
ಮೀಫ್ ಸಂಘಟನೆಯು ತುಂಬೆ ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್‌ನ ಸಹಯೋಗದೊಂದಿಗೆ ತುಂಬೆಯ ಬಿ.ಎ. ಕ್ರೀಡಾಂಗಣದಲ್ಲಿ ಆಯೋಜಿಸಿದ ಉಡುಪಿ ಮತ್ತು ದ.ಕ. ಅಂತರ್ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕರ ವಾಲಿಬಾಲ್ ಪಂದ್ಯಾಟ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಂಟ್ವಾಳ ಠಾಣೆಯ ಎಸ್ಸೈ ಕೃಷ್ಣಾ ಪಾಟೀಲ್ ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಪಂದ್ಯಾಟ ಉದ್ಘಾಟಿಸಿದರು. ಮೀಫ್ ಕೇಂದ್ರ ಸಮಿತಿಯ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದ.ಕ. ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ಲಿಲ್ಲಿ ಪಾಯಸ್, ಮೀಫ್ ಉಪಾಧ್ಯಕ್ಷ ಪರ್ವೇಝ್ ಅಲಿ, ಕನ್ವೀನರ್ ಮುಹಮ್ಮದ್ ಶಾರಿಕ್, ಸೆಕ್ರೆಟರಿ ಅನ್ವರ್ ಹುಸೈನ್ ಗೂಡಿನಬಳಿ, ತುಂಬೆ ವಿದ್ಯಾಸಂಸ್ಥೆಯ ಪಿಟಿಎ ಅಧ್ಯಕ್ಷ ನಿಸಾರ್ ಅಹ್ಮದ್ ವಳವೂರು, ಪಿಟಿಎ ಎಕ್ಸಿಕ್ಯೂಟಿವ್ ಕಮಿಟಿ ಸದಸ್ಯ ಮ್ಯಾಕ್ಸಿಂ ಕುವೆಲ್ಲೊ, ಹಜಾಜ್ ಗ್ರೂಪ್‌ನ ಮುಹಮ್ಮದ್ ಮುಸ್ತಫ, ತುಂಬೆ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಮುಖ್ಯಸ್ಥೆ ವಿದ್ಯಾ ಕೆ., ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಸ್ಥೆ ಮಲ್ಲಿಕಾ ಶೆಟ್ಟಿ, ಎಂಇಟಿ ಸೂಪರಿಂಟೆಂಡೆಂಟ್ ಬಿ. ಅಬ್ದುಲ್ ಕಬೀರ್, ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಮ್ ಜೆ. ನಾಯಕ್ ಕೆ, ದೈಹಿಕ ಶಿಕ್ಷಣ ಶಿಕ್ಷಕಿ ಮೋಲಿ ಎಡ್ನಾ ಗೊನ್ಸಾಲ್ವಿಸ್, ಫುಟ್ಬಾಲ್ ಕೋಚ್ ಗಫೂರ್ ಮತ್ತಿತರರು ಉಪಸ್ಥಿತರಿದ್ದರು.
ತುಂಬೆ ಕಾಲೇಜಿನ ಪ್ರಾಂಶುಪಾಲ ವಿ. ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ ರೈ ಬಿ. ಕಾರ್ಯಕ್ರಮ ನಿರೂಪಿಸಿದರು. ಮೀಫ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕೆ.ಬಿ. ವಂದಿಸಿದರು.
ಉಡುಪಿ ಮತ್ತು ದ.ಕ. ಜಿಲ್ಲೆಯ ಸುಮಾರು 20 ತಂಡಗಳು ಸ್ಪರ್ಧಾ ಕಣದಲ್ಲಿತ್ತು. ವಿಜೇತ ತಂಡಗಳಾದ ಪುತ್ತೂರು ಸಾಲ್ಮರದ ಮೌಂಟೆನ್ ವ್ಯೆ ಆಂಗ್ಲಮಾಧ್ಯಮ ಶಾಲೆ (ಪ್ರಥಮ), ಬಜ್ಪೆಯ ಅನ್ಸಾರ್ ಆಂಗ್ಲ ಮಾಧ್ಯಮ ಶಾಲೆ (ದ್ವಿತೀಯ), ಬಜ್ಪೆ ಅನ್ಸಾರ್ ಆಂಗ್ಲಮಾಧ್ಯಮ ಶಾಲೆಯ ಫಝಲುದ್ದೀನ್ (ಬೆಸ್ಟ್ ಆಲ್-ರೌಂಡರ್) ಪುತ್ತೂರು ಸಾಲ್ಮರದ ಮೌಂಟೆನ್ ವ್ಯೆ ಆಂಗ್ಲಮಾಧ್ಯಮ ಶಾಲೆಯ ದಿಹಾನ್ (ಬೆಸ್ಟ್ ಅಟ್ಯಾಕರ್) ಮತ್ತು ಮುನಾಝ್ (ಬೆಸ್ಟ್ ಪಾಸ್ಸರ್) ಅವರಿಗೆ ದ.ಕ. ಜಿಲ್ಲಾ ಎಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ, ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ ಮತ್ತಿತರರು ಟ್ರೋಫಿ ವಿತರಿಸಿದರು.







