ದ.ಕ. ಜಿಲ್ಲಾ ಯುವ ಕಾಂಗ್ರೆಸ್‌ನಿಂದ ಪಂಜಿನ ಮೆರವಣಿಗೆ

ಮಂಗಳೂರು, ಆ.25: ದೇಶದಲ್ಲಿ ನಡೆಯುತ್ತಿರುವ ಮತಗಳ್ಳತನ ವಿರುದ್ಧ ಜನಜಾಗೃತಿ ಮೂಡಿಸುತ್ತಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರಿಗೆ ಬೆಂಬಲವಾಗಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಸೋಮವಾರ ಸಂಜೆ ಪಂಜಿನ ಮೆರವಣಿಗೆ ನಡೆಯಿತು.
ಮಂಗಳೂರಿನ ನವ ಭಾರತ್ ಸರ್ಕಲ್ ಬಳಿಯಿಂದ ಮಂಗಳೂರು ಮಹಾನಗರ ಪಾಲಿಕೆಯ ಮುಂಭಾಗದವರೆಗೆ ಪಂಜಿನ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ , ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕ ಜೆ.ಆರ್.ಲೋಬೊ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಕಾಂಗ್ರೆಸ್ ಧುರೀಣರಾದ ಪದ್ಮರಾಜ್ ಆರ್ ಪೂಜಾರಿ , ರಮೇಶ್ ಶೆಟ್ಟಿ ಬೋಳಿಯಾರ್, ಆರ್.ಕೆ.ಪ್ರಥ್ವಿರಾಜ್, ಅಶೋಕ್ ಕುಮಾರ್ ಡಿ.ಕೆ, ಟಿ.ಕೆ. ಸುಧೀರ್ , ಕೆ.ಕೆ. ಶಾಹುಲ್ ಹಮೀದ್, ಎಸ್.ಅಪ್ಪಿ , ನವೀನ್ ಡಿ ಸೋಜ, ಸುಭೋದಯ ಆಳ್ವ, ಅಬ್ಬಾಸ್ ಅಲಿ, ಜೋಕಿಮ್ ಡಿ ಸೋಜ, ದ.ಕ. ಯೂತ್ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹೀಂ ನವಾಝ್, ಯೂತ್ ಕಾಂಗ್ರೆಸ್ ಧುರೀಣರಾದ ಆಸಿಫ್ ಬಜಾಲ್, ವೆಲ್ವಿನ್ ಜೈಸನ್ ಮತ್ತಿತರರು ಭಾಗವಹಿಸಿದ್ದರು.





